ಲೇಖಕ ಡಾ.ಮಲ್ಲಿಕಾರ್ಜುನ ಬಾಗೋಡಿ ಅವರ ಕೃತಿ-ಕಲ್ಯಾಣ ಕರ್ನಾಟಕದ ಚಿತ್ರಕಲೆ. ಪ್ರಾದೇಶಿಕವಾಗಿ ಕರ್ನಾಟಕದ ಉತ್ತರ ತುದಿಯಲ್ಲಿರುವ ಬೀದರ, ಜಿಲ್ಲೆಯಿಂದ ಮೊದಲ್ಗೊಂಡು ಕಲ್ಬುರ್ಗಿ, ಯಾದಗೀರ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ-ಈ ಎಲ್ಲ ಜಿಲ್ಲಾ ವ್ಯಾಪ್ತಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಎಂದು ಕರೆಯಲಾಗುತ್ತದೆ. ಈ ಪ್ರದೇಶಕ್ಕೆ ಚಾರಿತ್ರಿಕ ಹಿನ್ನೆಲೆಯಲ್ಲಿ ಇದೆ. ಸಾಂಸ್ಕೃತಿಕ ಪರಂಪರೆಗಳ ಈ ತವರು ಮನೆಯಿಂದ ಸಮಕಾಲೀನ ವರೆಗೂ ಕಲೆಯ ಬೆಳವಣಿಗೆಯನ್ನು ಗಮನಿಸಿದಾಗ ಅದರ ಅರಿವಾಗುತ್ತದೆ. ಪ್ರಸ್ತುತ ಕೃತಿಯು ಪ್ರಾಚೀನ ಕಾಲಘಟ್ಟದ ಕಲೆಗಳ ಮೇಲೆ ಹೆಚ್ಚು ಬೆಳಕನ್ನು ಚೆಲ್ಲುತ್ತದೆ. ಸಮಕಾಲಿನ ಕಲೆಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಜಾಗತಿಕ ಮನ್ನಣೆ ಗಳಿಸಿದೆ. ಸಮಕಾಲೀನ ಕಲೆ ಮತ್ತು ಕಲಾವಿದರ ಕುರಿತಂತೆ ಅಧ್ಯಯನ ದಾಖಲೆಗಳ ಬಗ್ಗೆ ಪ್ರಸ್ತುತ ಕೃತಿಯ ಅತ್ಯಂತ ಮಹತ್ವ ವೆನಿಸುತ್ತದೆ. ಆದಿಮನ ಕಲೆ, ಅರಸೊತ್ತಿಗೆಯಲ್ಲಿನ ಚಿತ್ರಕಲೆ, ಮಠ-ಮಂದಿರಗಳಲ್ಲಿಯ ಚಿತ್ರಕಲೆ, ಚಿತ್ರಮಂದಿರಗಳಲ್ಲಿನ ಚಿತ್ರಕಲೆ, ಮನೆ ಮಹಲುಗಳಲ್ಲಿಯ ಚಿತ್ರಕಲೆ, ಹಾಗೂ ಸಂಸ್ಥಾನ ಉತ್ತರ ಚಿತ್ರಕಲೆ, ಐದು ಕಾಲಘಟ್ಟದ ಚಿತ್ರಕಲೆಯ ವಿಸ್ತೃತ ಮಾಹಿತಿಯನ್ನುಈ ಕೃತಿಯು ಒಳಗೊಂಡಿದೆ.
©2024 Book Brahma Private Limited.