ಲೇಖಕ ರಾಜು ಮಳವಳ್ಳಿ ಅವರು ಸಂಪಾದಿಸಿದ ’ಕಲಾ ಸಂತೆಜಾತ್ರೆ ಕಲಾಯಾತ್ರೆ’ ವೈಚಾರಿಕ ಸಾಹಿತ್ಯ ಚಿತ್ರ ಸಂಪುಟ-2ರ ಕೃತಿ. ಡಾ. ಎಂ.ಎಸ್. ಮೂರ್ತಿ ಅವರು ಪ್ರಧಾನ ಸಂಪಾದಕರು. 'ದೃಶ್ಯಕಲೆಯ ವ್ಯಾಕರಣ' ಎನ್ನುವುದನ್ನು ಇಂದಿನ ಕಲಾಶಿಕ್ಷಣ ವಿದ್ಯಾರ್ಥಿಗಳಿಗೆ ಇನ್ನಷ್ಟು ಮನನ ಮಾಡುವ ಅಗತ್ಯವಿದ್ದು, ಈ ಕೃತಿಯು ಸಮರ್ಪಕವಾಗಿ ಬಳಕೆಯಾಗುತ್ತದೆ. ಈ ನಿಟ್ಟಿನಲ್ಲಿ. ಇಂದಿನ ಕಲಾ ಸಮುದಾಯದಲ್ಲಿ ಯುವ ಕಲಾವಿದರು ರೇಖಾಚಿತ್ರವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ? ಎಂಬ ವಾಸ್ತವವನ್ನು ದಾಖಲಿಸುವ ದೃಷ್ಟಿಯಿಂದ ಈ ಪ್ರಯೋಗ ನಡೆದಿದೆ. ಯುವ ಕಲಾವಿದರಿಗೆ ರೇಖೆಗಳ ಕುರಿತು ಆಸಕ್ತಿ ಮೂಡಿಸುವ ಸಲುವಾಗಿ 'ಸಂತೆ ಜಾತ್ರೆ-ಕಲಾಯಾತ್ರೆ' ಎಂಬ ಯೋಜನೆಯನ್ನು ಅಕಾಡೆಮಿಯ ಅವಧಿಯ ಪ್ರಾರಂಭದಲ್ಲೇ ಅನುಷ್ಠಾನಗೊಳಿಸಲಾಗಿದೆ. ಅಕಾಡೆಮಿಯ ಉದ್ದೇಶದಂತೆ ಹಳ್ಳಿಗಳ ಸಂತೆ, ಜಾತ್ರೆಗಳೆಂಬ ಆಚರಣೆ, ನಂಬಿಕೆ, ಅಲ್ಲಿನ ಜನರ ಪರಸ್ಪರ ಸ್ಪಂದನೆಗಳು ರೇಖಾಚಿತ್ರಗಳಾಗಿ ಚಾರಿತ್ರಿಕವಾಗಿ ಇಲ್ಲಿ ದಾಖಲಾಗಿವೆ. ಪೂರ್ಣ ಕಲಾಕೃತಿಗೆ ಬಳಸಿಕೊಂಡು ರೇಖೆಗಳನ್ನು ಧ್ಯಾನಿಸಿದ ಜಗದ್ವಿಖ್ಯಾತ ಕಲಾವಿದ ’ಪಾಲ್ ಕ್ಲೆ’ ಯ ಕೆಲವು ರೇಖೆಗಳೊಂದಿಗೆ ಅವರ ವೈಚಾರಿಕ ಬರಹವೂ ಇಲ್ಲಿದೆ. ಹಿರಿಯ ಕಲಾವಿದರು ಹೇಗೆ ರೇಖೆಗಳನ್ನು ತಮ್ಮ ಕಲಾರಚನೆಗೆ ಬಳಸಿಕೊಂಡಿದ್ದರು ಎನ್ನುವ ಅಂಶವನ್ನು ದಾಖಲಿಸುವ ದೃಷ್ಟಿಯಿಂದ ಅವರ ಕೃತಿಗಳನ್ನು ಕೂಡ ಇಲ್ಲಿ ಪ್ರಕಟಿಸಲಾಗಿದೆ. ಒಟ್ಟಾರೆಯಾಗಿ, ಗ್ರಾಮೀಣ ನೆಲೆಯ ಎಲ್ಲಾ ’ದೃಶ್ಯ ಸಂಭ್ರಮ’ ಗಳ ಚಿತ್ರಣಗಳನ್ನು ತಿಳಿಯಲು ಈ ಕೃತಿ ಸ್ಫೂರ್ತಿಯಾಗುತ್ತದೆ.
©2024 Book Brahma Private Limited.