‌ಜೆ ಎನ್ ಯು ಮೇಲೆ ದಾಳಿ ಭಾರತದ ಮೇಲೆ ದಾಳಿ

Author : ಕೆ. ನೀಲಾ

Pages 92

₹ 70.00




Year of Publication: 2016
Published by: ಕ್ರಿಯಾ ಪ್ರಕಾಶನ
Address: ನಂ.40/5, 2 ಬಿ ಮುಖ್ಯ ರಸ್ತೆ 16 ನೇ ಅಡ್ಡ ರಸ್ತೆ, ಸಂಪಗಿರಾಮನಗರ ಬೆಂಗಳೂರು-560027
Phone: 9036082005

Synopsys

ಕೆ. ನೀಲಾ ಅವರು JNU ಮೇಲೆ ದಾಳಿ ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ.   ದೇಶದ ಪ್ರತಿಷ್ಟಿತ ವಿಶ್ವವಿದ್ಯಾಲಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮೇಲೆ ಫೆಬ್ರವರಿ 9 ರಂದು ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ  ಜೆ.ಎನ್.ಯು ವಿದ್ಯಾರ್ಥಿ ಸಂಘಟನೆಯ ಮೇಲೆ ಮತ್ತು ಅದರ ಅಧ್ಯಕ್ಷ ಕನ್ಹಯ್ಯ ಕುಮಾರ್ ಮೇಲೆ ಸಂಘಪರಿವಾರ ದಾಳಿ ನಡೆಸಿ. ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರನಿಗೆ ದೇಶದ್ರೋಹಿ ಪಟ್ಟಕಟ್ಟಿ ಸೆರೆಮನೆಗೆ ಕಳುಹಿಸಿದಾಗ  ದೇಶದಾದ್ಯಂತ ಅನೇಕ ಹೋರಾಟಗಳು ನಡೆದವು. ದೇಶವನ್ನು ಆಳುತ್ತಿರುವ ಸರಕಾರ, ಆಳುವ ಪಕ್ಷ ಮತ್ತು ಅದರ ಮಿತ್ರ ಸಂಘಟನೆಗಳ ಪರಿವಾರದ ವ್ಯವಸ್ಥಿತ ಯೋಜಿತ ಕೆಲಸ ಇದಾಗಿತ್ತು. ಈ ದಾಳಿಯನ್ನು ಖಂಡಿಸಿ ಅನೇಕ ಪ್ರಗತಿಪರ ಚಿಂತಕರು ವಿಚಾರವಾದಿಗಳು ಬರೆದ ಲೇಖನಗಳ ಸಂಗ್ರಹವಾಗಿದೆ.

About the Author

ಕೆ. ನೀಲಾ
(01 August 1966)

ಕರ್ನಾಟಕದ ಪ್ರಮುಖ ಹೋರಾಟಗಾರ್ತಿ ಕೆ. ನೀಲಾ ಅವರು ಕನ್ನಡದ ಕಥೆಗಾರರಲ್ಲಿ ಒಬ್ಬರು. ನೀಲಾ ಅವರು 1966ರ ಆಗಸ್ಟ್ 1 ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ತೊಗರಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕೆಂದು ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಬರೆದ ಬದುಕು ಬಂದೀಖಾನೆ ಕೃತಿಯು ಜೈಲಿನ ಕಥನ ಒಳಗೊಂಡಿದೆ. ಮಹಿಳೆ- ಸಮಸ್ಯೆ ಸವಾಲುಗಳು  ಪ್ರಚಾರೋಪನ್ಯಾಸ ಮಾಲೆಯ ಕಿರು ಹೊತ್ತಿಗೆ, ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕತೆಗಳು ಎಂಬ ...

READ MORE

Related Books