ಉರಗತಜ್ಞ ಗುರುರಾಜ್ ಸನಿಲ್ ಅವರ ಕೃತಿ-ಹುತ್ತದ ಸುತ್ತಮುತ್ತ. ಸಣ್ಣ ಸಣ್ಣ ಕ್ರಿಮಿ-ಕೀಟಗಳು ಹುತ್ತದ ಸುತ್ತಮುತ್ತ ಇದ್ದು, ನೋಡಲು ಸಿಗುತ್ತವೆ. ಹುತ್ತದ ತಾಣವು ಇವುಗಳ ವಾಸಸ್ಥಾನಕ್ಕೆ ಪೂರಕ ವಾತಾವರಣ ನಿರ್ಮಿಸಿರುತ್ತದೆ. ಹಾವು ಕೆಟ್ಟದ್ದೆಂದು ಹುತ್ತವನ್ನು ನಾಶ ಪಡಿಸುತ್ತಾ ಹೋದರೆ, ಅದರ ಸುತ್ತಮುತ್ತ ಇರುವ ಅಸಂಖ್ಯ ಕ್ರಿಮಿ-ಕೀಟಗಳೂ ಸಾಯುತ್ತವೆ. ಇವುಗಳ ಇರುವಿಕೆಗೆ ಈ ಹುತ್ತಗಳು ಭದ್ರತೆಯನ್ನು ತಂದುಕೊಡುತ್ತವೆ. ಹುತ್ತ ಇರದಿದ್ದರೆ ಈ ಕ್ರಿಮಿ ಕೀಟಗಳ ತಾಣಕ್ಕೆ ಹತ್ತು ಹಲವು ರೀತಿಯಲ್ಲಿ ಅಭದ್ರತೆ ಕಾಡುತ್ತವೆ. ಇಂತಹ ಸಂಗತಿಗಳ ಹಾಗೂ ಪರಿಸರ ಸ್ನೇಹಿ ಅಂಶಗಳ ಕುರಿತು ಜನಮಾನಸದಲ್ಲಿ ಜಾಗೃತಿ ಮೂಡಿಸುವ ಕೃತಿ ಇದು.
©2024 Book Brahma Private Limited.