ಹೆಸರಿರದ ಹೂವು

Author : ಬಾಲಕೃಷ್ಣ ಬೇರಿಕೆ

Pages 32

₹ 50.00




Year of Publication: 2019
Published by: ಪ್ರೀತಿ ಪ್ರಕಾಶನ
Address: ಅಂಚೆ: ಪಾಣಾಜೆ-574529, ಪುತ್ತೂರು, ದಕ್ಷಿಣ ಕನ್ನಡ

Synopsys

ಹನಿಗವನ ಸಾಹಿತ್ಯ ರಚನೆಯಲ್ಲಿ ಬಾಲಕೃಷ್ಣ ಬೇರಿಕೆ ಅವರು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. “ಹೆಸರಿರದ ಹೂವು’ ಹನಿಗವನಗಳ ಸಂಕಲನಕ್ಕೆ ಬೆನ್ನುಡಿ ಬರೆದ ತಮ್ಮ ಮಾತುಗಳಲ್ಲಿ ಪ್ರಸಾದ ಶಣೈ ಆರ್‍.ಕೆ. ಅಭಿಪ್ರಾಯಪಟ್ಟು: ಆಗತಾನೆ ಬಿದ್ದ ಮಳೆಯಂತೆ ಮೂಡಿದ ಆಸೆಗಳಿಗೆಲ್ಲ ಗಾಢವಾಗಿ ಸ್ಫೂರ್ತಿಯಾಗುವ ಇಲ್ಲಿಯ ಕೆಲ ಕವಿತೆಗಳು ನೇರಳೆಹಣ್ಣು ತಿಂದು ಮುಗಿದರೂ ನಾಲಗೆಯಲ್ಲಿ ಬಹಳ ಹೊತ್ತು ಉಳಿಯುವ ನೇರಳೆಯ ಬಣ್ಣ ಹಾಗೂ ಪರಿಮಳದಂತಿವೆ'ಎಂದಿದ್ದಾರೆ. 

ಕವಿ ಬಾಲಕೃಷ್ಣ ಬೇರಿಕೆ “ನನ್ನ ಕವಿತೆ ಎಂದರೆ ನನ್ನೊಳಗೆ ಹೇಳದೇ ಉಳಿದ ನಿನ್ನ ಧ್ಯಾನ” ಎಂದೇ ಹನಿಗವನಗಳ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದು, ಓದುಗರನ್ನು ಹೊಸ ಆಲೋಚನೆಯತ್ತ ಸೆಳೆಯುವ ಸಾಮರ್ಥ್ಯ ಇಲ್ಲಿಯ ಸಾಹಿತ್ಯಕ್ಕೆ ಇದೆ

About the Author

ಬಾಲಕೃಷ್ಣ ಬೇರಿಕೆ

ಕವಿ, ಬರಹಗಾರ ಬಾಲಕೃಷ್ಣ ಬೇರಿಕೆಅವರು ಪುತ್ತೂರು ತಾಲೂಕು ಪಾಣಾಜೆ ಗ್ರಾಮದ, ಬೆಳ್ತಂಗಡಿ ತಾಲೂಕು ಕೊಯೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕ. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರ. ಅವರ ಕನ್ನಡ ಮತ್ತು ತುಳು ಬರಹಗಳು ಹಲವು ಪತ್ರಿಕೆ, ಅಭಿನಂದನ ಸಂಪುಟ, ಸ್ಮರಣ ಸಂಚಿಕೆ, ಸಾಹಿತ್ಯ ವಾಚಿಕೆಗಳಲ್ಲಿ ಪ್ರಕಟವಾಗಿವೆ. ವಿದ್ಯಾರ್ಥಿ ದೆಸೆಯಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜು ದ.ರಾ. ಬೇಂದ್ರೆ ಸ್ಮತಿ ಕವನ ಸ್ಪರ್ಧೆ, ಮಣಿಪಾಲ ಸಾಹಿತ್ಯ ಸಂಘದ ಟಿ.ಎಂ.ಎ.ಪೈ ಸ್ಮಾರಕ ಕಾವ್ಯ ಸರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮತ್ತು ಪುತ್ತೂರು ತಾಲೂಕು ಕನ್ನಡ ...

READ MORE

Related Books