ವೃತ್ತಿಯಿಂದ ಹೊಟೇಲ್ ಉದ್ಯಮಿಯಾಗಿರುವ ಬಾಬು ಶಿವ ಪೂಜಾರಿಯವರು ಉದ್ಯಮಿಯಾಗಿದ್ದರೂ, ಅವರ ಓದಿನ ಬೀಸು ದೊಡ್ಡದು. ವೇದದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೂ ಆಸಕ್ತಿ ಬೆಳೆಸಿಕೊಂಡ ಇವರು ಒಂದೇ ಧರ್ಮ, ಒಂದೇ ದೇವರು, ಒಂದೇ ಜಾತಿ ಎಂಬ ನಾರಾಯಣಗುರು ಆಶಯದಲ್ಲಿ ಬೆಳೆದವರು. 'ಹಗ್ಗಿನ ಹನಿ' ಬಾಬು ಶಿವಪೂಜಾರಿಯವರು ಪತ್ರಕರ್ತರಾಗಿ ವರ್ತಮಾನವನ್ನು ಹೇಗೆ ನೋಡಿದ್ದಾರೆ ಎನ್ನುವುದನ್ನು ಪ್ರಕಟಪಡಿಸುತ್ತದೆ. ಮುಂಬೈಯ ಗುರುತು' ಮಾಸ ಪತ್ರಿಕೆಯ ಸಂಪಾದಕರಾಗಿ ಇವರು ಬರೆದ ಸಂಪಾದಕೀಯ ಬರಹಗಳ ಸಂಗ್ರಹವೇ ಈ “ಹಗ್ಗಿನ ಹನಿ'. ಹಗ್ಗಿನ ಹನಿ ಕುಂದಾಪುರ ಗ್ರಾಮ್ಯ ಕನ್ನಡದಲ್ಲಿ ಬಳಕೆಯಲ್ಲಿರುವ ವಿಶಿಷ್ಟ ಪದಪುಂಜಿ, ಮುಂಗಾರಿನ ಮೊದಲ ದಿನಗಳ ಅಂದರ ಹಗ್ಗಿನ ತಿಂಗಳ ಮಳೆ ಹನಿಯನ್ನು ಹೀಗೆ ಕರೆಯುತ್ತಾರೆ. ಕಾದ ಭೂಮಿಗೆ ಸುರಿದ ಮಳೆಯ ಹನಿಯಂತೆಯೇ ಇಲ್ಲಿರುವ ಎಲ್ಲ ಬರಹಗಳೂ ವೈಚಾರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಓದುಗರನ್ನು ಮುಟ್ಟುತ್ತವೆ.
©2024 Book Brahma Private Limited.