'ಗುರುದತ್ತ ಚರಿತ್ರೆ' ಕೃತಿಯು ಎಂ.ಪಿ. ಮಂಜಪ್ಪ ಶೆಟ್ಟಿ ಅವರ ಸಂಪಾದಕತ್ವದ ಕೃತಿಯಾಗಿದೆ. 'ಗುರುದತ್ತ ಚರಿತ್ರೆ'ಯ ಕರ್ತೃವಿನ ಹೆಸರೇನೆಂಬುದು ತಿಳಿದುಬರುವುದಿಲ್ಲ. ಕವಿ ಚರಿತ್ರೆಕಾರರೇನೋ ಇದರ ಕರ್ತೃ ದೇವರಸ ಎಂದು ಹೇಳಿದ್ದಾರೆ. ಆದರೆ ವಾಸ್ತವ ವಾಗಿ ದೇವರಸನು ಈ ಕಾವ್ಯದ ಕರ್ತೃವಲ್ಲ, ಅವನು ಪ್ರಸ್ತುತ ಕಾವ್ಯಕರ್ತೃವಿನ ತಂದೆ. ಕವಿಚರಿತ್ರೆಕಾರರು ಹಾಗೇಕೆ ಗ್ರಹಿಸಿದರೋ ಗೊತ್ತಾಗುವುದಿಲ್ಲ.
ಕವಿ ತನ್ನ ಹೆಸರನ್ನು ಹೇಳಿಕೊಳ್ಳದೆ, ತಾನು ದೇವರಸನೆಂಬವನ ಮಗನೆಂಬುದನ್ನು ತನ್ನ ಕಾವ್ಯದಲ್ಲಿ ಸ್ಪಷ್ಟ ವಾಗಿಯೇ ಹೇಳಿದ್ದಾನೆ. ಅವನು ತನ್ನ ತಂದೆ ಮತ್ತು ಸ್ಥಳದ ಬಗ್ಗೆ ಹೇಳುತ್ತಾ: ಶ್ರೀಕಾಮಿನಿಗೆ ನೆಲೆವನೆಯೆಂದೆನಿಪ ಮ 1 ಹಾ ಕರ್ನಾಟಕದೇಶದೊಳಗೆ ತಾ ರಕವೆಸೆವುದು ಪುರವೊಂದು ಭೂಗತ | ಟಾಕವೇಸರನರ ಹಡೆದು ಆ ಪುರವರದ ಸನ್ನಿಧಿಯೊಳಗೊಂದು ಮ | ಹಾ ಪೃಥ್ವಿಧರವಿಹುದು ಆ ಪರ್ವತಾಗ್ರದಿ ಜಿನಗೃಹವೊಂದು ನಾ | ನಾ ಪರಿಯಿಂದೊಪ್ಪುತಿಹುದು ಆ ಸರ್ವ ರಂಜನೆಯಾಂತ ಜಿನೇಂದ್ರ | ವಾಸದೊಳಗೆ ಸೊಗಯಿಸುವ ಆ ಸನ್ನಿಧಿಪೀಠದ ಮೇಲೆ ಒಪ್ಪಿಹ | ನಾ ಸುಪಾರಿಶ್ವಜಿನೇಂದ್ರ ಹೀಗೆ ಕೃತಿಯು ಗುರುದತ್ತ ಚರಿತ್ರೆಯ ಕುರಿತು ವಿಸ್ತಾರವಾಗಿ ಮಾತನಾಡುತ್ತದೆ.
©2024 Book Brahma Private Limited.