‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-5’ ವಿಚಾರ-ವಿಮರ್ಶೆ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮೂರು ಭಾಗಗಳಲ್ಲಿ ಗೌರೀಶ ಕಾಯ್ಕಿಣಿ ಅವರ ವಿಚಾರ-ವಿಮರ್ಶೆಗಳು ಸಂಕಲನಗೊಂಡಿದ್ದು ಭಾಗ 1ರಲ್ಲಿ ಕಾವ್ಯವೆಂದರೇನು, ಹೊಸ ಕಾವ್ಯದ ಹಾದಿ, ರಸನಿಷ್ಪತ್ತಿ-ಒಂದು ವಿಶ್ಲೇಷಣೆ, ವಿಮರ್ಶೆಯ ಬಗೆಗೆ ಒಂದು ವಿಮರ್ಶೆ, ವಿಮರ್ಶೆಯಲ್ಲಿ ನವ್ಯತೆ, ವಿಮರ್ಶೆಗೆ ಯಾವ ದಾರಿ, ಅನುಭವ ಮತ್ತು ಅಭಿವ್ಯಕ್ತಿ, ಪರಕೀಯ(ಅನಾಥ) ಪ್ರಜ್ಞೆ, ಅಥೆಂಟಿಕ್ ಮತ್ತು ಜೆನ್ವಿನ್ , ಸಾಹಿತ್ಯದಲ್ಲಿ ಶೂದ್ರ-ಬ್ರಾಹ್ಮಣ ಸಂದರ್ಭ, ಎಡ ಯಾವುದು, ಬಲ ಯಾವುದು, ಕಾವ್ಯದಲ್ಲಿ ದಲಿತ ಪ್ರಜ್ಞೆ ಎಂಬ ಲೇಖನಗಳು ಸಂಕಲನಗೊಂಡಿವೆ. ಭಾಗ-2ರಲ್ಲಿ ಸುಬ್ಬಣ್ಣನ ಬಗೆಗೆ ಪುನರ್ವಿಚಾರ, ಗೀತ ನಾಟಕಗಳು, ಕಡಲು ಮತ್ತು ಮುಗಿಲು, ರಸಿಕರಂಗರ ಭಾವಗೀತಗಳು, ಕಡೆಂಗೋಡ್ಲು ಮತ್ತು ಆಲಿವರ್ ಗೋಲ್ಡ್ ಸ್ಮಿಥ್, ರಸಾರ್ದ್ರ ವಿಮರ್ಶಕ, ಭೈರಪ್ಪನವರ ಕಾದಂಬರಿಗಳ್ಳಿ ಧರ್ಮ ಲೇಖನಗಳು ಸಂಕಲನಗೊಂಡಿವೆ. ಭಾಗ-3ರಲ್ಲಿ ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ, ಡಾ. ಶಂ.ಬಾ. ಜೋಶಿಯವರ ಸಾಮಾಜಿಕ ತತ್ವವಿಚಾರಗಳು ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.