ಲೇಖಕ, ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರ ಕವನ ಸಂಕಲನ ‘ಈ ಚಳಿಗಾಲದಲ್ಲಿ ಅವಳು ಸಿಕ್ಕಿ’..ಪ್ರೇಮ , ಕಾಮ , ವಿರಹ ಮತ್ತು ದಾರ್ಶನಿಕತೆಯ ಹದವಾದ ಮಿಶ್ರಣ ಈ ಕವನ ಸಂಕಲದಲ್ಲಿದ್ದು, 230 ಬಿಡಿ ಹಿ ಕವನಗಳಿವೆ. ಈ ಸಂಕಲನಕ್ಕೆ ಸಾಹಿತಿ ಜೋಗಿ ಅವರು ಮುನ್ನುಡಿ ಬರೆದಿದ್ದು, ‘ಕತ್ತಲಲ್ಲಿ ಛಕ್ಕನೆ ಮಿನುಗಿ ಮರೆಯಾಗುವ ಮಿಂಚುಹುಳಗಳ ಬೆಳಕಿನಂಥ ಸಾಲುಗಳು , ಹನಿಗವಿತೆ ಎಂದು ಕರೆಯಲು ನಾನು ಇಷ್ಟಪಡದ , ಕವಿತೆ ಎಂದು ಕರೆಯಲಾಗದ , ತತ್ವಜ್ಞಾನ , ಪ್ರೇಮ , ಕಾಮ , ವಿರಹ ಮತ್ತು ದಾರ್ಶನಿಕತೆ ಹದವಾಗಿ ಬೆರೆತಿರುವ ಸ್ಕಾಚ್ ವಿಸ್ಕಿಯ ಬಿಂದುವಿನ ಹಾಗೆ ನನ್ನಲ್ಲಿ ಘಮ , ರುಚಿ ಮತ್ತು ಹಿತವಾದ ಮತ್ತನ್ನು ಉಳಿಸಿರುವ ಈ ಸಾಲುಗಳನ್ನು ನಾನು ಹಾಯ್ದುಗಳಂತೆ , ಝನ್ ಜ್ಞಾನೋದಯದಂತೆ , ನೀಲು ಕೊಟ್ಟ ಸಾಲುಗಳಂತೆ ಓದಿಕೊಂಡೆ . ಆದರೆ , ಇವು ಅವ್ಯಾವುವೂ ಅಲ್ಲ . ಗೋಪಾಲಕೃಷ್ಣ ಎಂಬ ಉಪ್ಪಿನಂಗಡಿಯ ಕಡು ವ್ಯಾಮೋಹಿ ತನ್ನ ಏಕಾಂತದಲ್ಲಿ ತೊಟ್ಟುಕೊಟ್ಟ ಸಾಂಗತ್ಯದ ಪರಿಮಳದ ಗಳಿಗೆಗಳಿಂದ ಮೂಡಿದ ಪದಚಿತ್ತಾರ . ನಾನಿವನ್ನು ವಿವರಿಸಲು ಹೋಗುವುದಿಲ್ಲ . ಮುಟ್ಟಿದರೆ ಮಾಸುವ ಮಂಜುಹನಿಯಂಥ ಈ ಕವಿಸಾಲುಗಳು ಅವರವರ ಕೆನ್ನೆಯ ರೋಮಾಂಚಕ್ಕೆ ಕಾರಣವಾಗಬೇಕು . ಮೇಲಿನ ಮೂರು ಚಿಟ್ಟೆಯಂಥ ಪದ್ಯಗಳೇ ಅದಕ್ಕೆ ಸಾಕ್ಷಿ’ ಎಂದಿದ್ದಾರೆ.
©2024 Book Brahma Private Limited.