ದೃಶ್ಯ ಸಂಕುಲ ಮಲ್ಲಿಕಾರ್ಜುನ ಬಾಗೋಡಿ ಅವರ 10ನೇ ಕೃತಿ. ಪ್ರಾಚೀನ ಚಿತ್ರಿತ ನೆಲೆಗಳು, ಸಮಕಾಲೀನ ಕಲೆಯ ಒಲವುಗಳು, ಕೆಲ ಹೊಸ ಸಂಗತಿಗಳೊಂದಿಗೆ ರೂಪಿಸಲ್ಪಟ್ಟ ವೈಚಾರಿಕ ಬರಹಗಳು, ದೃಶ್ಯಕಲೆಯ ಸಾಧಕರು-ಪೋಷಕರು ಸೇರಿದಂತೆ ಒಟ್ಟು 11 ಲೇಖನಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ. ಸಂಸ್ಕೃತಿಯ ಬಹುಮುಖಿ ನೆಲೆಗಳನ್ನು ಅನಾವರಣಗೊಳಿಸುವ ಇಲ್ಲಿನ ಲೇಖನಗಳಲ್ಲಿ ಕೆಲವು ಬೇರೆ ಬೇರೆ ಸಂದರ್ಭದಲ್ಲಿ ಪ್ರಕಟವಾಗಿದ್ದವು, ಕೆಲವು ಕೆಲವು ವಿಚಾರಗೋಷ್ಠಿಗಳಲ್ಲಿ ಮಂಡಿತ ಪ್ರಬಂಧಗಳು.
ರಾಷ್ಟ್ರಕೂಟ ಪ್ರಭುತ್ವ ಮತ್ತು ದೃಶ್ಯಕಲೆ, ಅವರ್ಣನೀಯ ನೇಸರಗಾನ, ನಾಲವಾರ ವಾರದ ಮನೆಯಲ್ಲಿನ ಭಿತ್ತಿ ಚಿತ್ರಗಳು, ಪೇಠಶಿರೂರ ಲಾಳಿಯವರ ಮನೆಯಲ್ಲಿನ ಭಿತ್ತಿ ಚಿತ್ರಗಳು, ಅಬ್ಬೆ ತುಮಕೂರು ಮಾಲಿಗೌಡರ ಮನೆ : ದೃಶ್ಯಾತ್ಮಕ ನೆಲೆಯಲ್ಲಿ, ಗರುಡಾದ್ರಿ ಮನೆತನ : ಕೆಲ ಹೊಸ ಸಂಗತಿಗಳು, ಮಾಣಿಕನಗರ ಮಹಾಸಂಸ್ಥಾನ: ಬೀದರ ಸ್ಕೂಲ್‌ನ ನೆಲೆಯಾಗಿತ್ತೆ?, ಕಲಾತ್ಮಕ ವಿನ್ಯಾಸದ ಸಗರನಾಡ ಸೀರೆಗಳು, ಸಾರ್ಥಕ ಬದುಕಿಗೆ ನೆರಳಿನಾಸರೆ, ಪ್ರೊ. ಎ.ಎಸ್. ಪಾಟೀಲ : ಧರ್ಮ-ಅಧ್ಯಾತ್ಮಗಳ ಸಮ್ಮಿಲನ, ಚಿತ್ತಾಪುರ ತಾಲೂಕಿನ ಸಾಂಸ್ಕೃತಿಕ ಒಳನೋಟ.
©2024 Book Brahma Private Limited.