ಡಾ. ಮಲ್ಲಿಕಾರ್ಜುನ ಬಾಗೋಡಿಯವರ ’ದೃಶ್ಯ ಸಂಸ್ಕೃತಿ’ ಹದಿನೈದು ಸಂಶೋಧನ ಲೇಖನಗಳ ಸಂಕಲನವಾಗಿದ್ದು, ದೃಶ್ಯಕಲಾ ಕ್ಷೇತ್ರಕ್ಕೆ ಸಂಬಂಧಿಸಿವೆ. ಈ ಲೇಖನಗಳನ್ನು ಅವಲೋಕನ, ವಿಮರ್ಶೆ, ಶೋಧ, ವೈಚಾರಿಕ, ವರದಿ ಹಾಗೂ ನೆನಪು ಎಂಬ ಶೀರ್ಷಿಕೆಗಳಡಿ ವಿಷಯಾನುಸಾರ ವಿಭಜಿಸಿ ಪ್ರಕಟಿಸಿದ್ದಾರೆ.
ಅವಲೋಕನ’ ದಲ್ಲಿ ವಿಜಯನಗರೋತ್ತರ ಹೈದರಾಬಾದ-ಕರ್ನಾಟಕ ಚಿತ್ರಕಲೆ, ಸಮಾಜ ವಿಕಾಸದಲ್ಲಿ ಕಲೆಗಳ ಪಾತ್ರ, ಡಾ. ಜೆ.ಎಸ್. ಖಂಡೇರಾವ : ಕುಂಚಲೋಕದ ಮಾಂತ್ರಿಕ. ’ವಿಮರ್ಶೆ’ಭಾಗದಲ್ಲಿ ಕಲಾಕೃತಿಗಳನ್ನು ನೋಡುವುದೂ ಒಂದು ಆರ್ಟ್!, ’ಶೋಧ’ದಲ್ಲಿ ಚಿತ್ತಾಪೂರ ಜೈನ ಬಸದಿಯಲ್ಲಿನ ಭಿತ್ತಿ ಚಿತ್ರಗಳು, ಕಾಲಗರ್ಭದಲ್ಲಿ ಲೀನವಾದ ರಾಯಚೂರು ಹನುಮಾನ ಮಂದಿರದ ಭಿತ್ತಿ ಚಿತ್ರಗಳು, ಜಗನ್ನಾಥ ವಾಡೆಯಲ್ಲಿನ ಭಿತ್ತಿ ಚಿತ್ರಗಳು.’ವೈಚಾರಿಕ’ದಲ್ಲಿ ಅಳ್ಳದುರ್ಗದಲ್ಲಿನ ಭಿತ್ತಿ ಚಿತ್ರಗಳು ಕಲ್ಯಾಣ ಚಾಲುಕ್ಯರ ಕಾಲದವೆ?... ಒಂದು ಚಿಂತನೆ, ಹೊಳಾಲಗುಂದಿ ಭಿತ್ತಿ ಚಿತ್ರಗಳು : ಕೆಲ ಹೊಸ ಸಂಗತಿಗಳು, ದುಬಲಗುಂಡಿಯ ಫತ್ತೇಪುರೆಯವರ ಮನೆ : ಒಂದು ಕಲಾ ನೆಲೆ, ಶನಿವಾರ ವಾಡೆ : ದೃಶ್ಯಾತ್ಮಕ ನೆಲೆಯಲ್ಲಿ. ’ವರದಿ’ ಭಾಗದಲ್ಲಿ ಕಂಪಿನ ಯಶಸ್ಸಿಗೆ ದೃಶ್ಯಭಾಷ್ಯದ ಮೆರಗು, ಜಾಕನಪಲ್ಲಿಯಲ್ಲಿ ದೇಸೀ ಕಲೆಗಳ ಸಂಭ್ರಮ, ನೇಪಥ್ಯಕ್ಕೆ ಸೇರಿದ ಪಾರಂಪರಿಕ ಕಟ್ಟಡಗಳು. ’ನೆನಪು’ದಲ್ಲಿ ಎಂ.ಬಿ. ಲೋಹಾರ್ : ಬಣ್ಣ-ಕುಂಚದೊಂದಿಗಿನ ಬಾಂಧವ್ಯ ಲೇಖನಗಳಿವೆ.
©2024 Book Brahma Private Limited.