ದೃಷ್ಟಿ ಸೃಷ್ಟಿ

Author : ಶಿವಾನಂದ ಎಚ್. ಬಂಟನೂರು

Pages 96

₹ 120.00




Year of Publication: 2009
Published by: ಅಲಕಾ ಪ್ರಕಾಶನ
Address: ಖೈನೂರು, ಸಿಂದಗಿ, ವಿಜಯಪುರ. 586128
Phone: 9481436296

Synopsys

’ದೃಷ್ಟಿ ಸೃಷ್ಟಿ’ ಕಲಾವಿದ ಶಿವಾನಂದ ಬಂಟನೂರು ಅವರು ಬರೆದ ಚಿತ್ರಕಲೆ ಕುರಿತಾದ ಆಯ್ದ ಹದಿಮೂರು ಲೇಖನಗಳ ಸಂಗ್ರಹ. ಚಿತ್ರಕಲೆಯ ಪ್ರಾಚೀನತೆ, ಆರಂಭಿಕ ಸಿದ್ಧಾಂಗಳು, ಚಿತ್ರಕಲೆಯ ಉಗಮ, ವಿಕಾಸದ ಕುರಿತಾದ ವಿವರಣಾತ್ಮಕ ಬರಹಗಳು ಕೃತಿಯಲ್ಲಿವೆ. ಕಲೆಯ ಮೂರು ಆಯಾಮಗಳಾದ ರಚನೆ, ಆಸ್ವಾದನೆ, ವಿಮರ್ಶೆ ಗಳ ಬಗ್ಗೆಯೂ ಇಲ್ಲಿ ಲೇಖನಗಳಿವೆ. ಕಲೆಗಾರ ಹಾಗೂ ವಿಮರ್ಶಕರ ನಡುವಿನ ಸಂಬಂಧ, ಕಲೆಯ ಆಸ್ವಾದನೆ ಹಾಗೂ ಮಾನಸಿಕ ಸ್ಥಿತಿಗಳ ನಡುವಿನ ಸಂಬಂಧ ಕುರಿತು ಇಲ್ಲಿನ ಲೇಖನಗಳು ಚರ್ಚಿಸುತ್ತವೆ.

About the Author

ಶಿವಾನಂದ ಎಚ್. ಬಂಟನೂರು

ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಖೈನೂರರಲ್ಲಿ 1967ರಲ್ಲಿ ಜನಿಸಿದ ಶಿವಾನಂದ ಬಂಟನೂರರು ಚಿತ್ರ ಕಲೆಗೆ ಸಂಬಂಧಿಸಿದಂತೆ ಎ.ಎಂ., ಜಿ.ಡಿ (ಆರ್)ಗಳಲ್ಲದೆ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸಂಶೋಧನಾ ಅನುದಾನ ಪಡೆದು 2002ರಲ್ಲಿ 'ಕರ್ನಾಟಕ ಜನಪದ ಶಿಲ್ಪಕಲೆ' ಕುರಿತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮೂಲತ ಕಲಾವಿದರಾದ ಬಂಟನೂರ ಅವರು ಬೆಂಗಳೂರಿನ ವೆಂಕಟಪ್ಪ ಕಲಾಶಾಲೆ ಸೇರಿದಂತೆ ಹಲವಾರು ಕಡೆಗಳಲ್ಲಿ ಏಕವ್ಯಕ್ತಿ ಪ್ರದರ್ಶನವನ್ನೂ ಪೂನಾ, ಗೋವ ತಮಿಳುನಾಡು ಸೇರಿದಂತೆ ರಾಜ್ಯದ ಹಲವಾರು ಕಡೆ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಚಿತ್ರಕಲೆಯ ಸ್ನಾತಕೋತ್ತರ ವ್ಯಾಸಂಗದಲ್ಲಿ ಪ್ರಥಮ ...

READ MORE

Related Books