ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಅಂಬೇಡ್ಕರ್ ಅವರ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಒಂದು ಜೀವನ ಚಿತ್ರ, ವೈಸ್ರಾಯ್ ಅವರ ಮಂಡಲಿಯಲ್ಲಿ ಕಾರ್ಮಿಕ ಸದಸ್ಯರಾಗಿ ನೇಮಕ, ಕಾರ್ಮಿಕ ಕಾನೂನು ರಚನೆಯಲ್ಲಿ ಏಕರೂಪತೆಯ ಅಗತ್ಯ, ಭಾರತ ಭೂಗರ್ಭಶಾಸ್ತ್ರ ಸಮೀಕ್ಷಾ ಸಲಹಾ ಸಮಿತಿಗೆ ಒಬ್ಬ ಸದಸ್ಯರ ಚುನಾವಣೆ,. ಭಾರತದಲ್ಲಿಯ ಪರಿಸ್ಥಿತಿ, ಭಾರತೀಯ ಭೂವಿಜ್ಞಾನ ಸರ್ವೇಕ್ಷಣಾ ಶಾಖೆಯ ಸಲಹಾ ಸಮಿತಿಯ ಓರ್ವ ಸದಸ್ಯರ ಚುನಾವಣೆ, ಭಾರತೀಯ ಕಾರ್ಮಿಕ ವರ್ಗವು ಯುದ್ಧವನ್ನು ಗೆಲ್ಲಲೇಬೇಕೆಂದು ಏಕೆ ನಿರ್ಧರಿಸಿದೆ?, ಕಾಗದ ನಿಯಂತ್ರಣ ಆಜ್ಞೆ, ಭಾರತೀಯ ಹಣಕಾಸು ಮಸೂದೆ’ ಮುಂತಾದ ಅಧ್ಯಾಯಗಳಿವೆ.
©2024 Book Brahma Private Limited.