ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಅಂಬೇಡ್ಕರ್ ಅವರ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ.
‘ಸಂವಿಧಾನ ರಚನಾ ಸಭೆಯಲ್ಲಿ ಡಾ. ಅಂಬೇಡ್ಕರ್ ಸಿದ್ಧಪಡಿಸಿ ಮಂಡಿಸಿದ ಭಾರತ ಸಂವಿಧಾನದ ವಿಧಿಗಳು ಮತ್ತು ಕಲಮುಗಳ ಮೇಲೆ ಮುಂದುವರಿದ ಚರ್ಚೆ ಮತ್ತು ಅವುಗಳ ಸ್ವೀಕಾg, ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾದ ಹಿಂದೂ ಸಂಹಿತೆ ಮಸೂದೆ (17 ನವೆಂಬರ್ 1947 ರಿಂದ 9 ಏಪ್ರಿಲ್ 1948ರ ವರೆಗೆ), ಪರಿಶೀಲನಾ ಸಮಿತಿಯವರಿಂದ ಹಿಂದೂ ಸಂಹಿತೆ ಮಸೂದೆ ತಿರುಗಿ ಬಂದ ನಂತರ ಹಿಂದೂ ಮಸೂದೆಯ ಮೇಲಣ ಚರ್ಚೆ (ದಿನಾಂಕ 11ನೇ ಫೆಬ್ರವರಿ 1949 ರಿಂದ ದಿನಾಂಕ 14 ಡಿಸೆಂಬರ್ 1950ರ ವರೆಗೆ), ಆಯ್ಕೆ ಸಮಿತಿಯಿಂದ ಹಿಂದಿರುಗಿಸಲಾಗಿದ್ದ, ಹಿಂದೂ ಸಂಹಿತೆ ಮಸೂದೆಯ ಮೇಲೆ ಚರ್ಚೆ’ ಈ ಕುರಿತ ಮಹತ್ವದ ಮಾಹಿತಿಗಳ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ.
©2024 Book Brahma Private Limited.