ದಲಿತ ಸಾಂಸ್ಕೃತಿಕ ಲೋಕ

Author : ಶಿವರಾಮ ಅಸುಂಡಿ

Pages 260

₹ 150.00




Year of Publication: 2007
Published by: ಸಚಿನ್ ಪಬ್ಲಿಷರ್ಸ್, ಬೆಂಗಳೂರು
Phone: 9448102158

Synopsys

ದಲಿತ ಸಾಂಸ್ಕೃತಿಕ ಲೋಕ ಕೃತಿ ಗುಲ್ಬರ್ಗಾ ವಿ.ವಿ.ಗೆ ಮಂಡಿಸಿದ ಪಿಎಚ್.ಡಿ. ಮಹಾ ಪ್ರಬಂಧ. ದಲಿತ ಲೇಖಕರ ಕಾದಂಬರಿಗಳಲ್ಲಿ ಬಿಂಬಿತಗೊಂಡ ದಲಿತ ಸಮುದಾಯದ ಸಂಸ್ಕೃತಿಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ನವೋದಯ ಪೂರ್ವದಿಂದ ಹಿಡಿದು ದಲಿತ-ಬಂಡಾಯ ಕಾಲಘಟ್ಟದವರೆಗಿನ ಸಾಹಿತ್ಯ ಚಳುವಳಿಟ ಘಟ್ಟಗಳಲ್ಲಿಯ ಪ್ರಾತಿನಿಧಿಕ ಕೃತಿಗಳನ್ನಿಟ್ಟುಕೊಂಡು ದಲಿತ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಲೋಕದ ಅನಾವರಣ ಮಾಡಲಾಗಿದೆ. ಏಕಮುಖ ಸಂಸ್ಕೃತಿಯ ಪುನರುತ್ಥಾನದ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಬಹು ಸಂಸ್ಕೃತಿಗಳ ಪ್ರಸ್ತುತುತೆಯನ್ನು ಎತ್ತಿಹಿಡಿಯುತ್ತಲೇ ಅದನ್ನೊಂದು ಪರ್ಯಾಯವಾಗಿಸುವ ಮಾನವೀಯ ನೆಲೆಯ ವಿಚಾರಗಲನ್ನು ಕಾದಂಬರಿಗಳ ಮೂಲಕ ಚರ್ಚಿಸಲಾಗಿದೆ. ವೈವಿಧ್ಯತೆಯ ಆಗರವಾಗಿರುವ ಬಹುಸಂಸ್ಕೃತಿಗಳ ಅನನ್ಯತೆಯನ್ನು ದಾಖಲಿಸುವ ಪ್ರಯತ್ನವನ್ನು ಹಲವು ಕಾದಂಬರಿಗಳು ಮಾಡಿವೆ. ದಲಿತ ಮತ್ತು ದಲಿತೇತರರ ಕಾದಂಬರಿಗಳನ್ನು ಅನುಲಕ್ಷಿಸಿ ದಲಿತ ಸಾಂಸ್ಕೃತಿಕ ಲೋಕವನ್ನು ತೆರೆದಿಡಲಾಗಿದೆ.

About the Author

ಶಿವರಾಮ ಅಸುಂಡಿ

ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು. ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ.  ’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ...

READ MORE

Related Books