ರಾಜ್ಯದ ದೊಡ್ಡ ತಾಲೂಕುಗಳ ಪಟ್ಟಿಗೆ ಸೇರಿರುವ ಚಿತ್ತಾಪುರ ತಾಲೂಕು ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿದೆ. ತಾಲೂಕಿನ ಒಟ್ಟು ಸಂಸ್ಕೃತಿಯನ್ನು ವಿವಿಧ ಸ್ತರಗಳಲ್ಲಿ ಅಧ್ಯಯನ ನಡೆಸಿದ ಬರಹಗಳು ಇಲ್ಲಿವೆ. ತಾಲೂಕಿನ ಸಾಂಸ್ಕೃತಿಕ ಹರವು ಅತ್ಯಂತ ವಿಶಾಲವಾಗಿದ್ದು, ಅದನ್ನು ಒಂದು ಸೂರಿನಡಿ ಹಿಡಿದಿಡುವ ಪ್ರಯತ್ನ. ತಾಲೂಕಿನ ಬಹುತ್ವ ಸಂಸ್ಕೃತಿಯ ಬೇರೆ ಬೇರೆ ಆಯಾಮಗಳನ್ನು ಪರಿಚಯಿಸುವ ಈ ಕೃತಿ ಮುಂದಿನ ಅಧ್ಯಯನಕಾರರಿಗೆ ಆಕರ ಗ್ರಂಥವಾಗಬಲ್ಲದು. ಲೇಖಕರು ವಿವಿಧ ನೆಲೆಯಲ್ಲಿ ಕೃಷಿಮಾಡಿ ಸಾಕಷ್ಟು ಹೆಸರು ಮಾಡಿದವರು. ಪುರಾತತ್ವ, ಇತಿಹಾಸ, ಸಾಹಿತ್ಯ, ಶಿಕ್ಷಣ, ಜಾನಪದ, ಕಲೆ; ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೃಷಿಮಾಡಿದ ತಜ್ಞ ಲೇಖಕರ ಸಮ್ಮಿಲನ ಇಲ್ಲಿದೆ. ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ ಈ ಕೃತಿಯನ್ನು ಸಂಪಾದಿಸಿದ್ದಾರೆ.
ಲೇಖನಗಳ ವಿವರ-
ಭೌಗೋಳಿಕ ವಿನ್ಯಾಸ - ನಟರಾಜ ಎಂ. ಶಿಲ್ಪಿ, ಇತಿಹಾಸ ಪರಂಪರೆ - ಸುನಿತಾ ದೇಶಪಾಂಡೆ, ನಾಗಾವಿ ಸಾಂಸ್ಕೃತಿಕ ಪರಂಪರೆ- ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ, ಸಾಹಿತ್ಯಿಕ ಪರಂಪರೆ- ಡಾ. ಸುರೇಶ ಜಾಧವ್, ಶೈಕ್ಷಣಿಕ ಪರಂಪರೆ- ಸಿದ್ದಲಿಂಗ ಜಿ. ಬಾಳಿ, ದೃಶ್ಯಕಲಾ ಪರಂಪರೆ- ಮಲ್ಲಿಕಾರ್ಜುನ ಸಿ. ಬಾಗೋಡಿ, ನಾಟಕ ಮತ್ತು ರಂಗಕಲಾ ಪರಂಪರೆ- ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಸಂಗೀತ ಪರಂಪರೆ- ಗುರುಪಾದಯ್ಯಸ್ವಾಮಿ, ಜಾನಪದ ಮತ್ತು ಸಂಪ್ರದಾಯಗಳು- ಶರಣಪ್ಪ ಕವಡೆ, ಪ್ರೇಕ್ಷಣೀಯ ಹಾಗೂ ಪುಣ್ಯಕ್ಷೇತ್ರಗಳು- ರೇವಣಸಿದ್ದಪ್ಪ ದುಕಾನ್, ಕೃಷಿ ಮತ್ತು ತೋಟಗಾರಿಕೆ- ಡಾ. ಮಹಾಂತಗೌಡ ಪಾಟೀಲ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ-ಮಂಡಲಗಿರಿ ಪ್ರಸನ್ನ, ತಾಲೂಕಿನ ಸಮಗ್ರ ಅರ್ಥವ್ಯವಸ್ಥೆ- . ಭೀಮಾಶಂಖರ ಎಚ್. ಕೊತಲೆ, ಹೈ-ಕ ವಿಮೋಚನ ಚಳವಳಿಯಲ್ಲಿ ತಾಲೂಕಿನ ಪಾತ್ರ -ರವೀಂದ್ರ ನರುಣಿ
©2024 Book Brahma Private Limited.