‘ಚಿತ್ರಕಲಾ ಪ್ರಪಂಚ’ ಹಿರಿಯ ಕಲಾವಿದ, ಲೇಖಕ ಎನ್. ಮರಿಶಾಮಾಚಾರ್ ಅವರು ರಚಿಸಿರುವ ಕೃತಿ. ಮಾನವರು ಆದಿಯಿಂದಲೂ ತಮ್ಮ ಸುತ್ತಲಿನ ಪ್ರಕೃತಿಯನ್ನು ನೋಡಿ ಉಂಟಾದ ಆನಂದವನ್ನು ವಿವಿಧ ಕಲೆಗಳಲ್ಲಿ ವ್ಯಕ್ತಪಡಿಸುತ್ತಿರುವವರು. ನಾಟ್ಯ, ಸಂಗೀತ, ಚಿತ್ರ, ಶಿಲ್ಪ ಮುಂತಾದ ಕಲೆಗಳೆಲ್ಲವೂ ಈ ಆನಂದದ ಪ್ರತಿಬಿಂಬಗಳು. ಭೂಮಿಯ ಮೇಲೆ ಮನುಷ್ಯನ ಜನನವಾಗಿ ಸುಮಾರು 10-20 ಲಕ್ಷ ವರ್ಷಗಳಾಗಿವೆ ಎಂಬುದು ಮಾನವಶಾಸ್ತ್ರಜ್ಞರ ಅಭಿಪ್ರಾಯ. ಇದರಲ್ಲಿ ಮನುಷ್ಯನು ನಾಗರಿಕತೆ ಹಂತವನ್ನು ಏರಿದುದು ಇಂದಿಗೆ ಸುಮಾರು 5-6 ಸಾವಿರ ವರ್ಷಗಳಿಂದೀಚೆಗೆ. ಈ ಅವಧಿಯಲ್ಲಿ ನಾಗರಿಕ ಇತಿಹಾಸ ನಂತರದಲ್ಲಿಯೂ ಇನ್ನೂ ಕಲೆ ಎಂದರೇನೆಂಬುದು ಚರ್ಚಾಸ್ಪದವಾಗಿಯೇ ಉಳಿದಿದೆ. ಸ್ಥೂಲವಾಗಿ ನೋಡಿದಲ್ಲಿ , ಚಿತ್ರಕಲೆಯು ಮನುಷ್ಯನ ಸೌಂದರ್ಯಾನುಭವದ ಪ್ರತಿಬಿಂಬ. ಕಲಾಸೌಂದರ್ಯ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಖುಷಿಕೊಡುತ್ತದೆ. ಮನುಷ್ಯನ ಸುಂದರ ಅಭಿವ್ಯಕ್ತಿಗಳಲ್ಲಿ ಚಿತ್ರಕಲೆಯೂ ಒಂದು. ಇಂತಹ ಚಿತ್ರಕಲೆಯ ಪ್ರಪಂಚವನ್ನು ಈ ಕೃತಿ ನಮ್ಮ ಮುಂದಿಡುತ್ತದೆ.
©2024 Book Brahma Private Limited.