ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದ ಕಳಚೂರಿ ಅರಸರ ಕಾಲದಲ್ಲಿ ವಿವಿಧ ಪರಿಕರಗಳ ಮೇಲಲ್ಲದೆ ಕಬ್ಬಿಣದ ವಸ್ತುಗಳ ಮೇಲೆ ಬೆಳ್ಳಿ, ಬಂಗಾರ ಲೇಪಿಸುವ ಹಾಗೂ ಚಿತ್ತಾರ ಕೆತ್ತಿ ಅದರಲ್ಲಿ ಕೂಡಿಸುವ ಕಲೆ ಜಾರಿಯಲ್ಲಿದ್ದುದು ಕಂಡುಬರುತ್ತದೆ. ಶಿಲಾಯುಗದಿಂದಲೂ ಬಿದರಿ ಕಲೆಯ ಪ್ರಕಾರ ಕಾಣಸಿಗುತ್ತದೆ. ಮುಂದಿನ ಯುಗಗಳಲ್ಲಿ ಕಲೆ ಹಂತಹಂತವಾಗಿ ಬದಲಾವಣೆ ಹೊಂದಿರುವುದು ಇತಿಹಾಸದ ಪುಟಗಳಿಂದ ವೇದ್ಯವಾಗುತ್ತದೆ. ಮಣ್ಣಿನ ಮಡಕೆಗಳ ಮೇಲೆ ಲೋಹದ ವಸ್ತುಗಳ ಮೇಲೆ ಚಿತ್ತಾರಗಳನ್ನು (ನಕ್ಷೆ) ಬಿಡಿಸುವ ಕಲೆಯನ್ನೂ ಮಾನವ ಬಹುಹಿಂದೆಯೇ ಬೆಳೆಸಿಕೊಂಡಿದ್ದ. ಇದು ಮಾನವನ ವಿಕಾಸದ ಸಂಕೇತವಾಗಿದೆ. ರಾಜಾಶ್ರಯದಲ್ಲಿ ಕಲೆಗಳು ಹುಲುಸಾಗಿ ಬೆಳೆದು ಜನಮನ್ನಣೆ ಗಳಿಸಿವೆ. ಈ ಕೃತಿಯಲ್ಲಿ ಬಿದರಿ ವಸ್ತುಗಳ ಪ್ರಾಚೀನತೆಯ ಉಲ್ಲೇಖವನ್ನು ವಿದ್ವಾಂಸರು ಹಲವು ರೀತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.