ಬಿ. ಜಿ. ಎಲ್. ಸ್ವಾಮಿ ಅವರ ಆಯ್ದ ಬರಹಗಳು

Author : ಬಿ.ಜಿ.ಎಲ್. ಸ್ವಾಮಿ

Pages 108

₹ 75.00




Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಸಸ್ಯಶಾಸ್ತ್ರದ ವಿಜ್ಞಾನಿಯಾಗಿದ್ದ ಬಿ.ಜಿ.ಎಲ್‌. ಸ್ವಾಮಿ ಅವರು ’ಹಸಿರು ಹೊನ್ನು’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದರು. ನವಿರಾದ ಹಾಸ್ಯ ಅವರ ಬರವಣಿಗೆ ವಿಶೇಷ. ಗಂಭೀರ ಸಂಗತಿಗಳನ್ನು ಕೂಡ ಮನಮುಟ್ಟುವ ಹಾಗೆ ಲಲಿತವಾದ ರೀತಿಯಲ್ಲಿ ಬರೆಯಬಲ್ಲವರಾಗಿದ್ದ ಸ್ವಾಮಿ ತಮ್ಮ ಕಾದಂಬರಿ ಹಾಗೂ ಗದ್ಯ ಬರವಣಿಗೆಯಿಂದ ಕನ್ನಡಿಗರಿಗೆ ಪ್ರಿಯರಾದ ಸ್ವಾಮಿ ಅವರ ಬರಹಗಳನ್ನು ಈ ಸಂಕಲನ ಒಳಗೊಂಡಿದೆ.

About the Author

ಬಿ.ಜಿ.ಎಲ್. ಸ್ವಾಮಿ
(05 February 1916 - 02 November 1980)

ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್‌. ಸ್ವಾಮಿ.  `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ. ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ...

READ MORE

Related Books