ಅಂಬಿಕಾತನಯದತ್ತರ ಹಾಡು-ಪಾಡು ಮತ್ತು ನನ್ನ ಕವಿತೆಗಳು

Author : ವಾಮನ ಬೇಂದ್ರೆ

Pages 64

₹ 75.00




Year of Publication: 2018
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

‘ಅಂಬಿಕಾತನಯದತ್ತರ ಹಾಡು-ಪಾಡು ಮತ್ತು ನನ್ನ ಕವಿತೆಗಳು’ ಎಂಬುದು ಕವಿ ಡಾ. ವಾಮನ ಬೇಂದ್ರೆ ಅವರು ಸಂಪಾದಿಸಿದ ಕೃತಿ. ಎನ್ನ ಪಾಡು ಎನಗಿರಲಿ, ಅದರ ಹಾಡನ್ನಷ್ಟೇ ನಿನಗೆ ನೀಡುವೆನು ರಸಿಕ’ ಎಂಬ ಅಂಬಿಕಾತನಯದತ್ತರ ಕವಿತೆಯ ಸಾಲು ಓದುಗರ ಬದುಕಿನ ಗ್ರಹಿಕೆಯನ್ನೇ ಬದಲಿಸಿ, ಜೀವನ ಪ್ರೀತಿಯನ್ನು ಹೆಚ್ಚಿಸಿದೆ. ಬದುಕಿನ ಚಿಂತನ, ಮಂಥನ, ದರ್ಶನಕ್ಕೆ ಇಂಬು ನೀಡುವ ಇಲ್ಲಿಯ ಕವಿತೆಗಳು ಬದುಕಿನ ಸಾಥ್ಕತೆಗೆ ಮುನ್ನುಡಿ ಬರೆಯುವಂತಿವೆ.

About the Author

ವಾಮನ ಬೇಂದ್ರೆ
(28 July 1935 - 28 September 2016)

ಪ್ರಾಧ್ಯಾಪಕ, ಸಾಹಿತಿ ವಾಮನ ಬೇಂದ್ರೆ ಅವರ (ಜನನ: 1935 ಜುಲೈ 28 ) ಹುಟ್ಟೂರು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರು. ತಂದೆ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿ. ಪ್ರಾರಂಭಿಕ ಶಿಕ್ಷಣ ಗದಗದಲ್ಲಿ ನೆರವೇರಿತು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರು. ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ - ಒಂದು ಅಧ್ಯಯನ ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದರು.  ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಭಾಷೆಗಳ ಮೇಲೆ ಪ್ರಭುತ್ವವಿತ್ತು. ಸಂಗೀತ, ನಾಟಕ, ಭಾಷಣದಲ್ಲೂ ಆಸಕ್ತಿಯಿದ್ದು, ‘ತೊದಲು’ ಅವರ ಮೊದಲ ಕವನ. ಸಂಕಲನ.   ‘ಕುಶಲಕವಿ ಲಕ್ಷ್ಮೀಶ, ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಲಕ್ಷ್ಮೀಶ : ಒಂದು ಅಧ್ಯಯನ, ...

READ MORE

Related Books