ಸಂವಹನ ಕೌಶಲ್ಯವು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಂತಹ ಕೌಶಲ್ಯ. ಯಾಕೆಂದರೆ ಕೇಳದಿದದರೆ ಏನೂ ಸಿಗುವುದು ಕಷ್ಟ ಎನ್ನುವ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು ಸಂವಹನ ಕಲೆಯನ್ನು ಎಷ್ಟು ಅರಗಿಸಿಕೊಂಡರೂ ಕಡಿಮೆಯೇ. ಅಷ್ಟಕ್ಕೂ ಈ ಕಲೆಯೇನು ಕಬ್ಬಿಣದ ಕಡಲೆಯಲ್ಲ. ಎಲ್ಲರೂ ಕಲಿಯಬಹುದಾದಂತಹ ಸಾಮಾನ್ಯ ವಿಷಯ, ಆದರೆ ಕಲಿಯುವ ರೀತಿ ಮಾತ್ರ ಫಲಪ್ರದವಾಗಿರಬೇಕು.
ಇಂತಹ ಕಲೆಯನ್ನು ಸಾಮಾನ್ಯ ಜನರೂ ಕೂಡ ಕಲಿತುಕೊಂಡು ತಮ್ಮ ಸಂವಹನವನ್ನು ಅಭಿವೃದ್ಧಿ ಪಡಿಸುವ ರೀತಿಯನ್ನು ಅಭಿವೃದ್ಧಿ ಸಂವಹನ ಕೌಶಲ್ಯಗಳು ಎಂಬ ಪುಸ್ತಕದ ಮೂಲಕ ತೋರಿಸಿಕೊಟ್ಟಿದ್ದಾರೆ ಲೇಖಕರಾದ ಅಬ್ದುಲ್ ರೆಹಮಾನ್ ಪಾಷಾ ಅವರು. ಸಾಮಾನ್ಯವಾಗಿ ವಿಜ್ಞಾನದ ಕುರಿತು ಸ್ವಾರಸ್ಯಕರವಾಗಿ ಬರೆಯುವ ಪಾಷಾ ಅವರ ಈ ಪುಸ್ತಕ ಭಾಷಾ ಜ್ಞಾನದ ಕುರಿತು ಅವರಿಗಿರುವಂತಹ ಜ್ಞಾನವನ್ನು ತೋರಿಸಿಕೊಡುತ್ತದೆ.
ಉತ್ತಮ ಸಂವಹನದಿಂದ ಎಂತಹ ಪರಿಸ್ಥಿತಿಯನ್ನು ಕೂಡ ಎದುರಿಸಬಹುದು. ಆ ಪರಿಯ ಸಂವಹನ ಕಲೆ ಗಿಟ್ಟಿಸಿಕೊಳ್ಳುವಲ್ಲಿ ಈ ಪುಸ್ತಕವು ಸಹಕಾರಿ. ಎಲ್ಲ ವಯೋಮಾನದ ಓದುಗರಿಗೂ ಸುಲಭವಾಗಿ ಅರ್ಥೈಸುವ ರೀತಿಯಲ್ಲಿ ಈ ಪುಸ್ತಕವನ್ನು ನಿರೂಪಿಸಿದ್ದಾರೆ ಲೇಖಕರಾದ ಅಬ್ದುಲ್ ರೆಹಮಾನ್ ಪಾಷಾ ಅವರು.
©2024 Book Brahma Private Limited.