ಮೂಲ ಕೃತಿಯ ಲೇಖಕರಾದ ಪ್ರೊ. ಕೆ.ಜಿ ಸುಬ್ರಹ್ಮಣ್ಯನ್ ಅವರು ರಾಷ್ಟ್ರ, ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವ ಕಲಾವಿದರು.
ಕಲಾ ಶಿಕ್ಷಕರಾಗಿ, ಕಲಾ ಚಿಂತಕರಾಗಿರುವ ಇವರ ಕಲಾಕೃತಿಗಳು ವಿಶ್ವವಿಖ್ಯಾತ ಕಲಾಪ್ರದರ್ಶನಗಳಲ್ಲಿ ಪ್ರಸಿದ್ದಿ ಪಡೆದಿದೆ. ಇವರ ಅನುಭವ ಜಗತ್ತನ್ನು ಮೂರು ದಶಕಗಳ ಕಲಾ ಶಿಕ್ಷಣ, ಕಲೆ ಕುಶಲಕಲೆಗಳೆರಡಕ್ಕೂ ಸಂಬಂಧಿಸಿದ ಹಲವಾರು ವಿಚಾರಗಳನ್ನು ಈ ಕೃತಿ ಒಳಗೊಂಡಿದೆ.
ಅನುವಾದಕರಾದ ಕೆ.ಎಸ್. ಶ್ರೀನಿವಾಸಮೂರ್ತಿ ಅವರು ಮೂಲ ಕೃತಿಯನ್ನು ಕನ್ನಡೀಕರಿಸಿದ್ದಾರೆ.
ಓದುಗರನ್ನು ನಗಿಸುತ್ತಲೇ ಕಾವ್ಯಮಯ ಶೈಲಿ ಮತ್ತು ಆಳವಾದ ಗ್ರಹಿಕೆಗಳ ಮೂಲಕ ಓದಿಸಿಕೊಂಡು ಹೋಗುವ ಕೃತಿಯಾಗಿದೆ. ಕಲೆಯೆಂದರೇನು? ಸೃಜನಶೀಲತೆ ಎಂದರೇನು? ಎಲ್ಲರೂ ಕಲಾವಿದರಾಗಬಹುದೆ? ಕಲಾಸೃಷ್ಟಿಯಿಂದ ಬುದ್ದಿ ಬೆಳೆಯುತ್ತದೆಯೇ? ಎಲ್ಲ ಕೈ ಕೆಲಸಗಳೇಕೆ ಕಲೆಗಳಾಗಬಾರದು ? ಕಲೆ ಮತ್ತು ಸಮಾಜಗಳ ನಡುವೆ ಯಾವ ರೀತಿಯ ಸಂಬಂಧ ಸಾಧ್ಯ? ಎನ್ನುವಂತಹ ಅನೇಕ ಪ್ರಶ್ನೆಗಳೊಂದಿಗೆ ಸೂಕ್ಷ್ಮವಾಗಿ ಗ್ರಹಿಸುವಂತೆ ಈ ಕೃತಿ ಅರ್ಥೈಸುತ್ತದೆ.
©2024 Book Brahma Private Limited.