ದ.ಬಾ. ಕುಲಕರ್ಣಿ ಎಂದು ಚಿರಪರಿಚಿತರಾಗಿರುವ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ನವೋದಯ ಕಾಲದ ಪ್ರಮುಖ ಲೇಖಕರಲ್ಲಿ ಒಬ್ಬರು. 1916ರಲ್ಲಿ ಜನಿಸಿದ ಅವರು ಧಾರವಾಡದಲ್ಲಿ ಲಲಿತ ಸಾಹಿತ್ಯ ಮಾಲೆ ಹಾಗೂ ಮನೋಹರ ಗ್ರಂಥ ಭಂಡಾರ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹಕ್ಕಿ ನೋಟ (ವ್ಯಕ್ತಿ ಚಿತ್ರ), ನಾ ಕಂಡ ಗೌರಮ್ಮ (ವ್ಯಕ್ತಿ ಚಿತ್ರ), ಸಾವಧಾನ (ಪ್ರಬಂಧ ಸಂಕಲನ), ಕಪ್ಪು ಹುಡುಗಿ ( ಕಥಾ ಸಂಕಲನ), ನಾಳಿನ ಮನಸು ( ಕಥಾ ಸಂಕಲನ), ಹಾಸು ಹೊಕ್ಕು ( ಕಥಾ ಸಂಕಲನ) ಅವರ ಪ್ರಕಟಿತ ಕೃತಿಗಳು. ದ.ಬಾ. ಅವರು 1963ರಲ್ಲಿ ಅಸು ನೀಗಿದರು.