ಶತಸ್ಮೃತಿ

Author : ಶ್ರೀಧರ ಉಪ್ಪೂರ

Pages 376

₹ 300.00




Address: ಮಾರ್ವಿನಾರ್ಣಪ್ಪ ಉಪ್ಪೂರ ಜನ್ಮಶತಮಾನೋತ್ಸವ ಸಮಿತಿ ಯಕ್ಷಗಾನ ಕಲಾ ಕೇಂದ್ರ, ಹಂಗಾರಕಟ್ಟೆ ಐರೋಡಿ, ಉಡುಪಿ ಜಿಲ್ಲೆ
Phone: 9449902794

Synopsys

ಯಕ್ಷಗಾನದ ಯುಗ ಪ್ರವರ್ತಕರಲ್ಲಿ ಮಾರ್ವಿ ನಾರ್ಣಪ್ಪ ಉಪ್ಪೂರರೂ ಪ್ರಮುಖರು. ಬಡಗುತಿಟ್ಟಿನ ಯಕ್ಷಗಾನ ಭಾಗವತರಾಗಿ, ಪ್ರಾಚಾರ್ಯರಾಗಿ ಯಕ್ಷಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದವರು. ಆ ಮಾತನ್ನು ಉಪ್ಪೂರರ ಭಾಗವತಿಕೆಯನ್ನು ನೋಡಿಯೇ ಹೇಳಿದ್ದಾರೇನೋ ಎನ್ನುವಷ್ಟು ಅವರು ರಂಗದಲ್ಲಿ ಹಲವು ಪಾತ್ರಗಳನ್ನು ಕುಣಿಸಿದ್ದಾರೆ. ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದವರು. 1966ರ ವೇಳೆಗೇ ಯಕ್ಷಗಾನ ಶಿಕ್ಷಕ ಎಂಬ ಕೈಪಿಡಿ ಹೊರತಂದರು.  ಯಕ್ಷಗಾನಕ್ಕೆ ಸೂಕ್ತವಾದ ಪಠ್ಯವನ್ನೂ ರೂಪಿಸಿದವರು. ಹಲವಾರು ಯಕ್ಷಗಾನ ಕೃತಿಯನ್ನೂ ರಚಿಸಿ ಯಕ್ಷಲೋಕಕ್ಕೆ ಕೊಟ್ಟವರು ಅವರು. ಉಪ್ಪೂರರ ಅಮರತ್ವವನ್ನು ಸಾರುವ ಪುಸ್ತಕ ಇದು. ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ, ಅವಲೋಕನ ಹೀಗೆ ಐದು ಭಾಗಗಳಲ್ಲಿ ಇಲ್ಲಿ ಲೇಖನಗಳಿವೆ. ಉಪ್ಪೂರರನ್ನು ಭಾಗವತರಾಗಿ ಕಂಡವರು, ಅವರೊಡನೆ ಒಡನಾಡಿದವರು, ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದವರು, ಅವರ ಭಾಗವತಿಕೆಗೆ ಅರ್ಥ ಹೇಳಿದವರು, ಕುಣಿದವರು, ಪ್ರೇಕ್ಷಕರಾಗಿ ಕುಪ್ಪಳಿಸಿದವರು ಹೀಗೆ ಎಲ್ಲರೂ ಇಲ್ಲಿ ಲೇಖನಗಳನ್ನು ಬರೆದಿದ್ದಾರೆ.

About the Author

ಶ್ರೀಧರ ಉಪ್ಪೂರ
(15 July 1953)

ನಿವೃತ್ತ ಉಪನ್ಯಾಸಕರು, ಲೇಖಕರಾದ ಶ್ರೀಧರ ಉಪ್ಪೂರ ಅವರು 1953 ಜುಲೈ 15ರಂದು ಕುಂದಾಪುರದ ಹಾಲಾಡಿಯಲ್ಲಿ ಜನಿಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯಿಂದ ಸ್ನಾತಕೋತ್ತರ ಪದವಿ ಹಾಗೂ ಯಕ್ಷಗಾನ ಕುರಿತು ಪಿಎಚ್‌ಡಿ ಪದವಿ ಪಡೆದಿರುವ ಇವರು ಬಸ್ರೂರಿನ ಶಾರದಾ ಕಾಲೇಜಿನಲ್ಲಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ  ಇವರು ಯಕ್ಷಗಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಶತಸ್ಮೃತಿ (ಅಭಿನಂದನಾ ಗ್ರಂಥ), ಭಾಗವ ನಾರಾಯಣಪ್ಪ ಉಪ್ಪೂರ, ಯಕ್ಷಗಾನ ಮತ್ತು ನಾಟಕ, ಪ್ರಬಂಜನ ಚರಿತೆ (ಯಕ್ಷಗಾನ ಪ್ರಸಂಗ), ಬಡಗತಿಟ್ಟು ಯಕ್ಷಗಾನ ದ್ರುವತಾರೆ ಶಿರಿಯಾರ ಮಂಜು ನಾಯ್ಕ ...

READ MORE

Related Books