‘ಸಮಗ್ರ ದಾಸ ಸಾಹಿತ್ಯ ಸಂಪುಟ: 21-ಭಾಗ 2’ ಇಂದಿರೇಶರು ಹಾಗೂ ಧಾರವಾಡ ಪ್ರದೇಶದ ಇತರ ಹರಿದಾಸರ ಕೀರ್ತನೆಗಳು ಕೃತಿಯನ್ನು ಡಾ. ಶ್ರೀನಿವಾಸ ಹಾವನೂರ ಹಾಗೂ ನಳಿನಿ ವೆಂಕಟೇಶ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ,ಕೀರ್ತನೆಗಳು ಸೇರಿದಂತೆ ಇಂದಿರೇಶರು(ಪಾಂಡುರಂಗಿ ಹುಚ್ಚಾಚಾರ್ಯರು), ಗುರು ಇಂದಿರೇಶರು, ಗೋಪತಿವಿಠವರು, ರಮಾಪತಿವಿಠಲರು, ಸಿರಿಗೋವಿಂಠಲರು, ರಾಜಗೋಪಾಲದಾಸರು, ತಂದೆ ವರದಗೋಪಾಲವಿಠಲರು, ಗುರುತಂದೆ ವರದಗೋಪಾಲವಿಠಲರು, ಸಿರಿಗುರುತಂದೆವರದಗೋಪಾಲವಿಠಲರು, ತಂದೆವರದವಿಠಲ, ತಂದೆ ಶ್ರೀ ನರಹರಿ, ಐಹೊಳೆವೆಂಕಟೇಶರು, ಸಿರಿವಿಠಲರು, ಗದುಗಿನ ವೀರನಾರಾಯಣರು(ಹುಯಿಲಗೋಳ ನಾರಾಯಣರಾಯರು), ದೀರ್ಘಕೃತಿಗಳು- ಲಕ್ಷ್ಮೀಲೀಲಾಮೃತಸಾರ-ಇಂದಿರೇಶ, ಗುರುಕಥಾಮೃತಸಾರ-ಗುರು ಇಂದಿರೇಶ, ಕೀಚಕವಧವು-ರಾಜಗೋಪಾಲವಿಠಲ, ಶ್ರೀರಾಮ ಪಾರಿಜಾತ- ಪ್ರಹೊಳೆವೆಂಕಟೇಶ, ಅಖಿಲಾಂಡಕೋಟಿಬ್ರಹ್ಮಾಂಡನಾಯಕ- ಸಿರಿ ವಿಠಲ. ಪ್ರಹ್ಲಾದಚರಿತ್ರೆ-ಸಿರಿವಿಠಲ, ಶ್ರೀನಾರಾಯಣ ಪಂಜರವು-ಸಿರಿವಿಠಲ ಸಂಕಲನಗೊಂಡಿದ್ದು, ಅನುಬಂಧದಲ್ಲಿ ಕಠಿಣಶಬ್ದಗಳ ಅರ್ಥ, ಟಿಪ್ಪಣಿಗಳು, ಕೀರ್ತನಗೆಳ ಆಕಾರಾಧಿಸೂಚಿ ಸಂಕಲನಗೊಂಡಿವೆ.
©2024 Book Brahma Private Limited.