ಕರ್ನಾಟಕದ ಚಿತ್ರಕಲಾ ಪರಂಪರೆ

Author : ಎನ್. ಮರಿಶಾಮಾಚಾರ್

Pages 154

₹ 200.00




Year of Publication: 2012
Published by: ಸಿ.ಎಂ.ಎನ್ ಪ್ರಕಾಶನ
Address: #88, 1ನೇ ಎ ಕ್ರಾಸ್, 7ನೇ ಮುಖ್ಯರಸ್ತೆ, 2ನೇ ಬ್ಲಾಕ್, ಜಯನಗರ, ಬೆಂಗಳೂರು- 560011

Synopsys

‘ಕರ್ನಾಟಕದ ಚಿತ್ರಕಲಾ ಪರಂಪರೆ’ ಬಹುಮುಖ ಪ್ರತಿಭೆಯ ಕಲಾವಿದ ಎನ್. ಮರಿಶಾಮಾಚಾರ್ ಅವರ ಕೃತಿ. ದೃಶ್ಯಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮರಿಶಾಮಾಚಾರ್, ಕಲೆಯ ಕುರಿತಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ, ಪ್ರಸ್ತುತ ‘ಕರ್ನಾಟಕದ ಚಿತ್ರಕಲಾ ಪರಂಪರೆ’ ಪುಸ್ತಕವು ದೃಶ್ಯಕಲಾ ಕ್ಷೇತ್ರದಲ್ಲಿ ವಿಶಿಷ್ಟವಾಗಿದ್ದು, ರಾಜ್ಯದ ಭಿತ್ತಿಚಿತ್ರ ಮತ್ತು ಕಲಾ ಪರಂಪರೆಯನ್ನು ತಿಳಿಸುವ ಪುಸ್ತಕವಾಗಿದೆ .

About the Author

ಎನ್. ಮರಿಶಾಮಾಚಾರ್
(15 May 1951 - 03 April 2013)

ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್‌ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್‌  ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್‌ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್‌ ಅವರು ಜಯನಗರದ ಆರ್‌.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್‌.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...

READ MORE

Related Books