‘ಕನ್ನಡ- ಕನ್ನಡಿಗ-ಕರ್ನಾಟಕ ಕೃತಿಯು ಎಲ್.ಎಸ್. ಶೇಷಗಿರಿರಾವ್, ಗೊ.ರು. ಚನ್ನಬಸಪ್ಪ, ರಾ.ನಂ. ಚಂದ್ರಶೇಖರ್ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಎಂ. ಚಿದಾನಂದ ಮೂರ್ತಿ ಅವರು, ನಿಮ್ಮ ಕೈಯಲ್ಲಿರುವ ಈ ಕೃತಿಯ ಪರಿವಿಡಿಯನ್ನು ತೆಗೆದು ನೋಡಿ : ಆದರಲ್ಲಿರುವ ವಿಷಯ ಸಂಪತ್ತಿಗೆ ನೀವು ಮಾರುಹೋಗದೆ ಇರಲಾರಿರಿ. ಕನ್ನಡಿಗರನ್ನು ರೋಮಾಂಚನಗೊಳಿಸಿರುವ ಕವಿಗಳ ನಾಡಪ್ರೇಮ ಗೀತಗಳೇ, ಕರ್ನಾಟಕದ ಎರಡು ಸಾಏರ ವರ್ಷಗಳ ಸಾಂಸ್ಕೃತಿಕ ಸಂಪತ್ತೇ - ಇವು ಸುಲಭವಾಗಿ ನಿಮ್ಮ ಕೈಗೆ ಲಭ್ಯ. ಇಂದಿನ ಕರ್ನಾಟಕದ ಬಹುಮುಖ ಮಾಹಿತಿಯಂತೂ ನಿಮಗೆ ಇಲ್ಲಿ ಅಂಕಿ ಅಂಶಗಳ ಮೂಲಕ, ವಿವರಣೆಯ ಮೂಲಕ ಸುಲಭವಾಗಿ ಲಭ್ಯ, ಐ.ಎ.ಎಸ್. ಇತ್ಯಾದಿ ಪರೀಕ್ಷೆಗಳ ವಿವರ ಬೇಕೆ - ತೆಗೆದು ನೋಡಿ. ಈ ಪುಸ್ತಕದ ಸಿದ್ಧತೆಯ ಹಿಂದೆ ಹಲವರ, ಹಲವು ಕಾಲದ ಶ್ರಮವಿದೆ; ಅದು ಪ್ರೀತಿಯ ಶ್ರಮ, ಕರ್ನಾಟಕದ ಇಂದಿನ ಸ್ಥಿತಿಗತಿಗಳನ್ನು ಅಂಕಿ ಅಂಶ ವಿವರಣೆ ಮೂಲಕ ಕೊಟ್ಟು ಕರ್ನಾಟಕದ ಬಗ್ಗೆ ನಿಜವಾದ ಅರಿವು, ಪ್ರೀತಿಗಳನ್ನು ಮೂಡಿಸುವುದು ಈ ಕೃತಿಯ ಮೂಲೋದ್ದೇಶ. ಈ ಬಗೆಯ ಕೃತಿ ಬಹುಶಃ ಕನ್ನಡದಲ್ಲಿ ಇನ್ನೊಂದು ಇಲ್ಲ. ಮೊದಲ ಆವೃತ್ತಿಯ ಹತ್ತು ಸಾವಿರ ಪ್ರತಿಗಳು ಒಂದು ವರ್ಷದಲ್ಲಿ ಸುಲಭವಾಗಿ ಖರ್ಚಾದುವು. ಆ ಆವೃತ್ತಿಯ ಪರಿಷ್ಕೃತ, ವಿಸ್ತ್ರತ ರೂಪ ಇದು. ಇದು ತೀರ ಈಚಿನ ಅಂಕಿ ಅಂಶಗಳನ್ನು ಒಳಗೊಂಡಿರುವ ಅಪೂರ್ವ ಕೃತಿ; ಎಲ್ಲ ಕನ್ನಡಿಗರ ಕಣ್ಣನ್ನು ತೆರೆಯಿಸುವಂತಹುದು. ಕರ್ನಾಟಕದ ಬಗ್ಗೆ ಅಭಿಮಾನ ಇರುವ ಎಲ್ಲರೂ ಸಂಗ್ರಹಿಸಬೇಕಾದ, ಪರಿಶೀಲಿಸಬೇಕಾದ ಒಂದು ಅನನ್ಯ ಕೃತಿ. ಹೆಚ್ಚೇನು : ಇದು ಆಧುನಿಕ ಕರ್ನಾಟಕದ ಸಂಕ್ಷಿಪ್ತ ವಿಶ್ವಕೋಶ ಎಂದಿದ್ದಾರೆ.
©2024 Book Brahma Private Limited.