ರೈತರಿಗೆ ಸಂಬಂಧಿಸಿದ, ನೀರಿಗೆ ಸಂಬಂಧಿಸಿದ ಹೋರಾಟಗಳ ಸಾಮಾಜಿಕ, ರಾಜಕೀಯ ಆಯಾಮಗಳು ಜನರಿಗೆ ಗೊತ್ತಿರುವುದೇ ಇಲ್ಲ. ಉತ್ತರ ಕರ್ನಾಟಕದ ಜನರ ಹೋರಾಟಗಳು ದಕ್ಷಿಣ ಕರ್ನಾಟಕದವರಿಗೆ ಅರ್ಥವಾಗುವುದಿಲ್ಲ. 'ಕಳಸಾ ಬಂಡೂರಿ ಹೋರಾಟ' ಪ್ರತಿದಿನ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತವೆಯೇ ಹೊರತು, ನಗರ ಪ್ರದೇಶದ ಜನರಿಗೆ ಈ ಹೋರಾಟದ ಆಳ-ಅಗಲ ಈಗಲೂ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳಸಾ ಬಂಡೂರಿಯ ಜನರ ನೀರಿನ ಹಾಹಾಕಾರ ಮತ್ತು ಅದರ ಹಿಂದಿರುವ ನೀಚ ರಾಜಕಾರಣವನ್ನು ಪರಿಚಯಿಸುವ ಪುಟ್ಟ ಕೃತಿಯನ್ನು ಸಿರಿಮನೆ ನಾಗರಾಜ್ ಸಂಯೋಜಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಳಸಾ ಬಂಡೂರಿ ರೈತರ ಹೋರಾಟಕ್ಕೆ ಸಿನೆಮಾ ನಟರೂ ಕೈ ಜೋಡಿಸಿದ್ದಾರೆ. ಈ ಮೂಲಕ ಹೋರಾಟವನ್ನು ಹೆಚ್ಚು ಜನಪ್ರಿಯಗೊಳಿಸಿದ್ದಾರೆ. ನಗರವೂ ಅವರ ಹೋರಾಟದಲ್ಲಿ ಕೈ ಜೋಡಿಸಿತು. ಈ ಹಿನ್ನೆಲೆಯಲ್ಲಿ ಹೋರಾಟ ಅತ್ಯಂತ ಕುತೂಹಲವನ್ನು ಕೆರಳಿಸಿದೆ. ಸಮಾನತೆಗಾಗಿ ಜನಾಂದೋಲನವು ಕಳಸಾ ಬಂಡೂರಿ ಹೋರಾಟದ ಕುರಿತಂತೆ ನಡೆಸಿದ ಅಧ್ಯಯನದ ಅಕ್ಷರ ರೂಪವೇ ಈ ಕೃತಿ.
©2024 Book Brahma Private Limited.