ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ ಎನ್ನುತ್ತದೆ ಲೇಖಕ ಸಿ.ಆರ್. ಗೋಪಾಲ್ ಅವರ ‘ಸಾಮಾಜಿಕ ಕ್ರಿಯಾಚರಣೆ’. ಈ ಕೃತಿಯು ಸಮಾಜಕಾರ್ಯದ ಒಂದು ವಿಧಾನವಾಗಿದ್ದು, ಒಟ್ಟು ಹನ್ನೆರಡು ಅಧ್ಯಾಯಗಳನ್ನು ಒಳಗೊಂಡಿದೆ. ಸಾಮಾಜಿಕ ಕ್ರಿಯಾಚರಣೆಯ ಸಿದ್ಧಾಂತ, ಪರಿಕಲ್ಪನೆ, ವ್ಯಾಖ್ಯೆಗಳು, ಲಕ್ಷಣಗಳು, ಗ್ರಹಿಕೆಗಳು, ಸಮಾಜ ಸುಧಾರಣೆ, ಚರಿತ್ರೆ, ಧ್ಯೇಯೋದ್ದೇಶಗಳು, ತತ್ತ್ವಗಳು, ಮಾದರಿಗಳು, ಕಾರ್ಯತಂತ್ರಗಳು, ಪ್ರಕ್ರಿಯೆ, ಜನಜಾಗೃತಿ, ಸಂಪನ್ಮೂಲಗಳ ಕ್ರೋಡೀಕರಣ, ಸಾಮಾಜಿಕ ಕ್ರಿಯಾಚರಣೆ ಮತ್ತು ಕಾನೂನು, ಕಾರ್ಮಿಕರು ಮತ್ತು ಕಾನೂನು, ಸಮಾಜಕಾರ್ಯಕರ್ತನ ಪಾತ್ರ, ಸಾಮಾಜಿಕ ಆಂದೋಲನಗಳು, ಭಾರತದಲ್ಲಿ ಆಂದೋಲನಗಳು, ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯೆ ಮುಂತಾದ ವಿಷಯಗಳನ್ನು ವಿವರಿಸಲು, ಪ್ರತಿಪಾದಿಸಲು ಪ್ರಯತ್ನ ಮಾಡಲಾಗಿದೆ. ಕೃತಿ ಸಂಶೋಧನಾ ಅಂಶಗಳನ್ನು ಒಳಗೊಂಡಿದೆ. ಹಾಗೇನೇ ಕೃತಿ ವಿಶ್ಲೇಷಣಾತ್ಮಕ ಮತ್ತು ವಿವರಣಾತ್ಮಕ ಗುಣಗಳನ್ನೂ ಹೊಂದಿದೆ. ಪುಸ್ತಕದ ಕೊನೆಗೆ ಆಕರ ಸಾಹಿತ್ಯದ ಮೂಲಗಳನ್ನು ಒದಗಿಸಲಾಗಿದೆ. ಕಠಿಣ ಶಬ್ದಗಳ ಅರ್ಥಗಳನ್ನು ಕೊಡಲಾಗಿದೆ.
©2024 Book Brahma Private Limited.