ಇದು ಉತ್ತರ ಕನ್ನಡ ಜಿಲ್ಲೆಯ ಒಂದು ಸ್ಥಳದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಕತೆಯಾಗಿದೆ. ಹುಟ್ಟಿನಿಂದ ಭಾರತೀಯನಾದರೂ, ಇಲ್ಲಿಯ ಧರ್ಮ, ವರ್ಗಗಳಿಗೆ ಸೇರಿಕೊಂಡಿದ್ದರೂ ಸಹ ಕ್ರೈಸ್ತ ಧರ್ಮಕ್ಕೆ ಪರಿವರ್ತಿವಾಗಿ, ಅದರ ಕಟ್ಟು ಪಾಡು, ನೀತಿ ನಿಯಮಗಳಿಗೆ ಒಳಗಾಗಿ ಜೀವನ ಸಾಗಿಸುವ ಸಂಸಾರದಲ್ಲಿ, ಲೋಕಾಚಾರ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ವ್ಯಕ್ತಿಯು ತನ್ನ ಸುತ್ತಲಿನ ವಾತಾವರಣದ ಪ್ರಭಾವಕ್ಕೆ ಒಳಗಾಗಿ, ತನಗೆ ಗೊತ್ತಿಲ್ಲದೇ ಸ್ವಾತಂತ್ರ ಹೋರಾಟದಲ್ಲಿ ತೊಡಗುತ್ತಾನೆ. ಈ ಪ್ರಕ್ರಿಯೆಯಲ್ಲಿ ಅವನ ವಿಚಾರ, ಆಲೋಚನಾ ಕ್ರಮ ಮತ್ತೊಂದು ಸ್ಥರವನ್ನು ಮುಟ್ಟುತ್ತದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ವರ್ಗದವರು ಭಾಗವಹಿಸಿದ್ದರೆಂಬುದು ತಿಳಿದಿರುವ ಸಂಗತಿ. ಆದರೆ ಎಲ್ಲ ಧರ್ಮೀಯರ ಪಾತ್ರವಿತ್ತೇ? ಭಾರತೀಯ ಕ್ರಿಶ್ಚಿಯನ್ನರು ಸಹ ಬ್ರಿಟಿಷರ ವಿರುದ್ಧಹೋರಾಟ ನಡೆಸಿದ್ದರೆ ಎಂಬ ಪ್ರಶ್ನೆಯೊಂದಿಗೆ ಹೊರಟ ವಸ್ಯತುವೇ ಇಲ್ಲಿ ಕಾದಂಬರಿ ರೂಪ ತಳೆದಿದೆ.
©2025 Book Brahma Private Limited.