ಕದನ ಕಣ

Author : ಹೆಚ್. ಆರ್. ನವೀನ್ ಕುಮಾರ್

Pages 135

₹ 120.00




Year of Publication: 2021
Published by: ಕ್ರಿಯಾ ಮಾಧ್ಯಮ ಪ್ರೈ. ಲಿ
Address: # 4ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು-560079
Phone: 9036082005

Synopsys

`ಸಂಘರ್ಷಕ್ಕಿಳಿದ ರೈತರೊಡನೆ ದೆಹಲಿ ಗಡಿಗಳಲ್ಲಿ ಒಂಭತ್ತು ದಿನ' ಎಂಬ ಉಪಶೀರ್ಷಿಕೆಯಡಿ ರೂಪುಗೊಂಡ ಕೃತಿ-ಕದನ ಕಣ. ಲೇಖಕ ಎಚ್.ಆರ್. ನವೀನ್ ಕುಮಾರ್ ಅವರು ರಚಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪಾಲ್ಗೊಂಡು, ಅಲ್ಲಿ ಕಳೆದ 9 ದಿನಗಳ ತಮ್ಮ ಅನುಭವವನ್ನು ದಾಖಲಿಸಿದ್ದಾರೆ. ರೈತ ಹೋರಾಟ, ಸದಾ ದುಡಿದು ತಿನ್ನುವ ರೈತರಿಗೆ ಹೋರಾಟದ ಅಗತ್ಯ ಏಕೆ ಬಂದಿತು? ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ತಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡುವ ರೈತರ ಸಂಕಲ್ಪ ಇತ್ಯಾದಿ ಅಂಶಗಳನ್ನು ಲೇಖಕರು ಸವಿವರವಾಗಿ ದಾಖಲಿಸಿದ್ದಾರೆ. ಲೇಖಕರು ಸ್ವತಃ ಕಲಾವಿದರಾದ್ದರಿಂದ, ಹೋರಾಟದ ಉತ್ತಮ ಛಾಯಾಚಿತ್ರಗಳು ಇಡೀ ಕೃತಿಯ ಮೌಲ್ಯ ಹೆಚ್ಚಿಸಿವೆ. ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆ ಅವರು ಕೃತಿಗೆ ಬೆನ್ನುಡಿ ಬರೆದು ‘ನವೀನ್ ಅವರು ರೈತರ ಚಳವಳಿಯನ್ನು ಎದೆಗಪ್ಪಿಕೊಂಡು ಬರೆದಿದ್ದಾರೆ’ ಎನ್ನುವ ಮೂಲಕ ಬರವಣಿಗೆಯಲ್ಲಿಯ ಆಪ್ತತೆ, ತಲ್ಲೀನತೆ, ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಶಂಸಿಸಿದ್ದಾರೆ.

 

About the Author

ಹೆಚ್. ಆರ್. ನವೀನ್ ಕುಮಾರ್

ಲೇಖಕ ಹೆಚ್. ಆರ್. ನವೀನ್ ಕುಮಾರ್ ಅವರು ಮೂಲತಃ ಹಾಸನದವರು. ಛಾಯಾಚಿತ್ರಗ್ರಾಹಕರು. ದೆಹಲಿಯಲ್ಲಿ ನಡೆದ ರೈತರ ಸತ್ಯಾಗ್ರಹದಲ್ಲಿ ಒಂಬತ್ತು ದಿನ ಕಳೆದ ತಮ್ಮ ಅನುಭವವನ್ನು ದಾಖಲಿಸಿದ ಕೃತಿ-‘ಕದನ ಕಣ’ ರಚಿಸಿದ್ದಾರೆ.ಬಾಲಚಂದ್ರ ಮುಂಗೇಕರ್ ಅವರು ಬರೆದ ‘ಗುಜರಾತ್ ಅಭಿವೃದ್ಧಿ ಕತೆ: ಸತ್ಯ ಮತ್ತು ಮಿಥ್ಯ’ ಕೃತಿಯ ಸಂಗ್ರಹಾನುವಾದ ಇವರದ್ದು.  ...

READ MORE

Reviews

‘ಕದನ ಕಣ’ ಕೃತಿಯ ವಿಮರ್ಶೆ

ಒಂದು ವರ್ಷದಿಂದ ನಮ್ಮ ದೇಶದಲ್ಲಿ ಚರ್ಚೆಯಾಗುತ್ತಿರುವ ವಿಷಯ ರೈತರು ದೆಹಲಿಯ ಸುತ್ತ ಐದು ಪ್ರದೇಶಗಳಲ್ಲಿ ನಡೆಸುತ್ತಾ ಬಂದಿರುವ ಶಾಂತಿಯುತ ಉಗ್ರ ಚಳುವಳಿ. ಪ್ರಧಾನಿ ಮತ್ತು ಅವರ ಮಂತ್ರಿಮಡಲದ ಸದಸ್ಯರಿಗೆ ಇದು ಕಣ್ಣಿಗೆ ಕಾಣದ ಜನಸ್ತೋಮ. ಅತ್ಯಂತ ಬೇಜವಾಬ್ದಾರಿಯಿಂದ ವಿಶಾಲ ರೈತ ಸಮೂಹವನ್ನು ನಮ್ಮ ಅಶಿಕ್ಷಿತ ಸಚಿವರು ಖಲೀಸ್ತಾನಿಗಳು, ನಕ್ಸಲೈಟರು, ಆಂದೋಲನವೀರರು, ಎಂದೆಲ್ಲಾ ಮೂದಲಿಸಿ ತಮ್ಮ ಮುಖಗಳಿಗೆ ಅಮೇಧ್ಯ ಬಳಿದುಕೊಂಡಿದ್ದಾರೆ. ಮೂಲತಃ ಈ ಶಾಂತಿಯುತ ನತಾ ಚಳುವಳಿಗೆ ಮೂಲಕಾರಣವಾದ ಕಟ್ಟಾ ರೈತವಿರೋಧಿ, ದೇಶ ವಿರೋಧಿ, ಶಾಸನಗಳು ಮೂರು. ಅವನ್ನು ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿವೆಯೆಂಬ ಸುಳ್ಳು ಯಾರಿಗೂ ಗೌರವ ತರುವಂಥದಲ್ಲ. ಸಂವಿಧಾನದ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ಸ್ವೇಚ್ಛಾವರ್ತಿ ಕೇಂದ್ರ ಸರ್ಕಾರದ ಮುತ್ಸದ್ದಿಗಳು ಒಂದು ರೀತಿಯ ಪಾರ್ಲಿಮೆಂಟರಿ ಗೂಂಡಾರಿಗಳಲ್ಲಿ ತೊಡಗಿ ಅವನ್ನು ಶಾಸನಗಳೆಂದು ಘೋಷಿಸಿಬಿಟ್ಟರು. ನ್ಯಾಯಾಲವು ಈ ಪ್ರಜಾಪ್ರಭುತ್ವದ ಅಣಕವನ್ನು ಈವರೆಗೂ ಗಂಭೀರವಾಗಿ ಪರಿಗಣಿಸಿ ಮೊಕದ್ದಮೆಯನ್ನು ಕೈಗೆತ್ತಿಕೊಂಡು ಮುನ್ನಡೆಸಿಲ್ಲ. 1975ರ ತುರ್ತುಪರಿಸ್ಥಿಯ ಘೋಷಣೆಯನ್ನು ಸಂವಿಧಾನ ಬಾಹಿರವೆಂದು ದಿನಂಪ್ರತಿ ಒರಲುವ ಕೇಂದ್ರ ಸರ್ಕಾರದ ನಾಯಕರು ಮೂರು ಕೃಷಿಸಂಬಂಧಿ ಮಸೂದೆಗಳನ್ನು ಜಾರಿಮಾಡಿರುವುದು ಸಂವಿಧಾನವನ್ನು ಕಸದ ಬುಟ್ಟಿಗೆ ಹಾಕುವ ಮುಖಾಂತರವೇ.

ಕೃಷಿಯನ್ನು ರೈತರ ಹಿಡಿತದಲ್ಲಿ ಉಳಿಸಲು ಮತ್ತು ಕೃಷಿಕರ ಮೂಲಭೂತ ಹಕ್ಕನ್ನು ಕಾಪಾಡಿಕೊಳ್ಳಲು ನಡೆಯುತ್ತಿರುವ ಈ ಹೋರಾಟವು ನಿಜಕ್ಕೂ ದೇಶದ ಸ್ವಾಯತ್ತತೆಯನ್ನು ಗಟ್ಟಿಗೊಳಿಸಲು ನಡೆಯುತ್ತಿರುವ ಹೋರಾಟ. ಎಚ್. ಆರ್. ನವೀನ್ ಕುಮಾರ್ ಮತ್ತು ಜಗದೀಶ್ ಸೂರ್ಯ ಒಂಭತ್ತು ದಿನಗಳ ಕಾಳ ದಿಟ್ಟ ಚಳುವಳಿ ನಡೆಯುತ್ತಿರುವ ದೆಹಲಿಯ ಗಡಿಭಾಗಗಳಲ್ಲಿ ಉಳಿದುಕೊಂಡು ಪ್ರತ್ಯಕ್ಷದರ್ಶಿಗಳಾಗಿ ಇಡೀ ಚಳುವಳಿಯ ಅಮೂಲಾಗ್ರ ಅಧ್ಯಯನ ನಡೆಸಿದ್ದಾರೆ. ಎರಡೇ ತಿಂಗಳಲ್‌ಲಿ ಎರಡನೆಯ ಮುದ್ರಣವನ್ನು ಕಂಡ ನವೀನ್ ಕುಮಾರ ”ಕದನ ಕಣ” ನಮ್ಮ ರಾಜ್ಯದ ಕೃಷಿಕ್ಷೇತ್ರದ ಬಗೆಗೆ ಕಾಳಜಿ ಇರುವವರೆಲ್ಲಾ ಓದಲೇ ಬೇಕಾದ ಪುಸ್ತಕ. ಸ್ಪೂರ್ತಿದಾಯಕವೂ ಬೋಧಪ್ರದವೂ ಆದ ಮನನೀಯ ದಾಖಲೆಯೊಂದನ್ನು ನೀಡಿರುವ ನವೀನ್ ಕುಮಾರ್ ಅವರು ರೈತ ಚಳುವಳಿಗೆ ಈ ಪುಸ್ತಕದ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ. ಚಳುವಳಿಯ ಅಮೋಘ ಸಂಘಟನೆ ಹಾಗೂ ಕೆಟ್ಟ ಕೃಷಿ ಕಾಯಿದೆಗಳ ವಿವರಗಳ್ನನು ಯಥಾವತ್ತಾಗಿ ತಿಳಿಯಲು ಈ ಪುಸ್ತಕವು ಅತ್ಯುಪಯುಕ್ತವಾಗಿದೆ. 

(ಕೃಪೆ ; ಹೊಸತು, ಬರಹ ; ಜಿ. ರಾಮಕೃಷ್ಣ)

---

‘ಕದನ ಕಣ’ ಕೃತಿಯ ಮಿಮರ್ಶೆ

ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ರೈತರ ಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲಾಗುತ್ತಿದೆ ಎಂದು ದೇಶದ ಮೂರು ಮುಖ್ಯ ಕೃಷಿ ಪರ ಪುಸ್ತಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿತು. ಈ ತಿದ್ದುಪಡಿ ದೇಶದ ಮೂಲೆ, ಮೂಲೆಯಲ್ಲಿರುವ ರೈತರನ್ನು ಬಡಿದೆಬ್ಬಿಸಿ ರಾಷ್ಟ್ರ ರಾಜಧಾನಿ ದೆಹಲಿಯಿಂದ 40 ಕಿಮೀ ದೂರದಲ್ಲಿ ಸಿಂಘು ಗಡಿಯಲ್ಲಿ ಜಮಾವಣೆಯಾದ ರೈತರು ವಷ ರನ್ನು ಸರ್ಕಾರದ ಯಾವ ಬೆದರಿಕೆಗೂ ಜಗ್ಗದೆ ಹೋರಾಟ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗಿ ಉಳಿದಿದೆ. ಸ್ವಾತಂತ್ರ್ಯ ನಂತರದಲ್ಲಿ ನಡೆದ ರೈತರ ಶರಣ ಈ ಬೃಹತ್ ಹೋರಾಟವನ್ನು ಪ್ರತ್ಯಕ್ಷವಾಗಿ ಅರ್ಥ ಲೇಖಕ ನವೀನ್ ಕುಮಾರ್ ಕಟ್ಟಿಕೊಟ್ಟಿದ್ದಾರೆ. ಇದ್ದೇ ಉತ್ತಮ ಛಾಯಾಗ್ರಾಹಕರಾಗಿರುವ ಪ್ರಶ್ನೆಗೆ ಲೇಖಕರು ಹೋರಾಟದ ಫೋಟೋಗಳನ್ನು ಹೊಸ ದಾಖಲಿಸುವ ಸೃಷ್ಟಿಸಿದ್ದಾರೆ.

(ಕೃಪೆ ; ಹೊಸ ಪುಸ್ತಕ, ಸಮಾಜಮುಖಿ)

---

Related Books