ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರು ಸಂಪಾದಿಸಿದ ಕೃತಿ-ದಲಿತ ಹೋರಾಟ ದರ್ಶನ. ಕರ್ನಾಟಕದಲ್ಲಿ ದಲಿತ ಹೋರಾಟದ ಆರಂಭವು ಅಂದಿನ ಸಾಮಾಜಿಕ ಒತ್ತಡದ ಸನ್ನಿವೇಶಗ:ಳ ಸೃಷ್ಟಿ. ಬಂಡಾಯ ಸಾಹಿತ್ಯವು ದಲಿತ ಸಾಹಿತ್ಯಕ್ಕಿಂತ ಭಿನ್ನ. ಹಾಗೆಯೇ ಹೋರಾಟವೂ ಸಹ. ಬಂಡಾಯ ಸಾಹಿತ್ಯ ಎಷ್ಟೇ ದಲಿತ ಪರ ಇದೆ ಎಂದರೂ ದಲಿತರ ನೋವುಗಳ ಸ್ವರೂಪವೇ ಬೇರೆ. ದಲಿತರೇ ಬರೆದ ಸಾಹಿತ್ಯಕ್ಕೆ ತನ್ನದೇ ಆದ ಸಾಮಾಜಿಕ ಮಹತ್ವ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರಂಭವಾದ ದಲಿತ ಹೋರಾಟದ ಸ್ವರೂಪವನ್ನು, ಅದರ ಏಳು-ಬೀಳುಗಳನ್ನು ಒಂದು ಕಡೆ ಇಟ್ಟು ಪರಿಶೀಲಿಸುವ ಕೃತಿ ಇದು. ರಾಜ್ಯದ ವಿವಿಧೆಡೆಯಿಂದ ಸರಣಿ ರೂಪದಲ್ಲಿ ಬಂದ ಲೇಖನಗಳನ್ನು ಒಂದೆಡೆ ಸಂಗ್ರಹಿಸಿದ್ದರ ಫಲವಾಗಿ ಈ ಕೃತಿ ಮೂಡಿಬಂದಿದೆ.
©2024 Book Brahma Private Limited.