ಡಾ. ವಿ. ಮುನಿವೆಂಕಟಪ್ಪ ಅವರ ಸಂಪಾದಿತ ಲೇಖನಗಳ ಕೃತಿ-ಬಹುಜನ ಚಳವಳಿಯ ಚರಿತ್ರೆ ಸಂಪುಟ-5. ಬಹುಜನ ಎಂಬ ಪದದ ಪರಿಕಲ್ಪನೆಯನ್ನು ಬುದ್ಧನು ಬಹುಜನ ಹಿತಾಯ ಬಹುಜನ ಸುಖಾಯ ಎಂಬ ತತ್ವದಡಿ ಮೊದಲ ಬಾರಿಗೆ ನೀಡಿದನು. ಸಮಾಜದಲ್ಲಿರುವ ಎಲ್ಲ ಜನರು ಬಹುಜನ ಎಂಬ ಪರಿಕಲ್ಪನೆಯ ವ್ಯಾಪ್ತಿಗೆ ಒಳಪಡುವರು. ಆದರೆ, ಜನರನ್ನು ವಿಭಜಿಸಿ ಶೋಷಿಸಲು ಅನುಕೂಲ ಮಾಡಿಕೊಂಡ ರಾಜಸತ್ತೆ, ಅಧಿಕಾರಶಾಹಿ, ಬಂಡವಾಳಶಾಹಿ, ಪುರೋಹಿತಶಾಹಿ ಇತ್ಯಾದಿ ಪ್ರಭುತ್ವಕ್ಕೆ ಅಂಟಿಕೊಂಡು ಜನರನ್ನು ಶೋಷಿಸುವ ಗುಂಪು -ಬಹುಜನ ಎಂಬುದು ಕೇವಲ ಶೋಷಣೆಗೆ ಒಳಪಡುವವರು ಎಂದೇ ಗುರುತಿಸಿತು ಮಾತ್ರವಲ್ಲ; ಅವರನ್ನೇ ಶೋಷಣೆಗೆ ಗುರಿಪಡಿಸಿತು. ಇಂತಹ ಮಹತ್ವದ ವಿಚಾರಗಳ ಲೇಖನಗಳನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.