ಅಂಬೇಡ್ಕರ್ ಸಿದ್ಧಾಂತ

Author : ವಿಕಾಸ್ ಆರ್ ಮೌರ್ಯ

Pages 34

₹ 30.00




Year of Publication: 2021
Published by: ದಲಿತ ಸಂಘರ್ಷ ಸಮಿತಿ
Address: ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ, ಲೇಟ್ ನಾರಾಯಣಪ್ಪ ಬಿಲ್ಡಿಂಗ್, ಕೊರಚರಪೇಟೆ, ಹಳೆ ಬಸ್ ನಿಲ್ದಾಣದ ಹತ್ತಿರ, ಚಿಕ್ಕಬಳ್ಳಾಪುರ
Phone: 9449073119

Synopsys

‘ಅಂಬೇಡ್ಕರ್ ಸಿದ್ಧಾಂತ’ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ-ಪ್ರಜಾತಂತ್ರದ ತತ್ವಶಾಸ್ತ್ರ- ದುರ್ಗಂ ಸುಬ್ಬಾರಾವ್ ಮತ್ತು ಪಿ.ಟಿ.ಎಂ. ಶಿವಪ್ರಕಾಶ್ ಅವರ ಇಂಗ್ಲಿಷ್ ಕೃತಿಯ ಕನ್ನಡಾನುವಾದ. ಲೇಖಕ ವಿಕಾಸ್ ಆರ್ ಮೌರ್ಯ ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. AMBEDKARISM: SOCIAL DEMOCRATIC PHILOSOPHY OF DR.AMBEDKAR ಎಂಬ ಕೃತಿಯು ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಜ್ಞಾನವನ್ನು ಬಹಳ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಈ ಕೃತಿಯನ್ನು ಆಂದ್ರಪ್ರದೇಶದ ಭಾರತೀಯ ಅಂಬೇಡ್ಕರ್ ಸೇವೆ ಹೊರತಂದಿದೆ. ಭಾರತದ ಪ್ರಜಾಪ್ರಭುತ್ವವು ಜಾತೀಯ-ಬಂಡವಾಳ ಶಾಹಿತ್ವದೆಡೆಗೆ ವೇಗವಾಗಿ ಚಲಿಸುತ್ತಿರುವ ಈ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರ ವಿಚಾರಧಾರೆಗಳು ಪರಿಹಾರವಾಗಿ ಕಾಣುತ್ತಿರುವ ಕಾರಣ ಓದುಗರಿಗೆ ಈ ಕೃತಿಯನ್ನು ನೀಡುತ್ತಿದ್ದೇವೆ ಎಂಬುದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಪಷ್ಟನೆ.

About the Author

ವಿಕಾಸ್ ಆರ್ ಮೌರ್ಯ
(08 June 1981)

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.  ಹಾಗೇ 'ನೀಲವ್ವ' ...

READ MORE

Related Books