ತೆಲಂಗಾಣ ಹೋರಾಟ

Author : ಬಿ. ಸುಜ್ಞಾನಮೂರ್ತಿ

Pages 554

₹ 400.00




Year of Publication: 2013
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ಎಮ್ಮಿಗನೂರ್, ಬಳ್ಳಾರಿ- 583113

Synopsys

‘ತೆಲಂಗಾಣ ಹೋರಾಟ’ ತೆಲುಗು ಲೇಖಕ ಪಿ. ಸುಂದರಯ್ಯ ಅವರ ಕೃತಿಯನ್ನು ಬಿ. ಸುಜ್ಞಾನಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ತೆಲಂಗಾಣ ರೈತ ಹೋರಾಟ 1946ರಿಂದ 1951ರವರೆಗೆ ಆಂಧ್ರಪ್ರದೇಶದಲ್ಲಿ ಘಟಿಸಿದ ಚಾರಿತ್ರಿಕ ಆಂದೋಲನ. ಬ್ರಿಟಿಷ್ ಸಾಮ್ರಾಜ್ಯಶಾಹಿ, ನಿಜಾಮನ ಫ್ಯೂಡಲ್ ಆಳ್ವಿಕೆ ಮತ್ತು ಜೀವವಿರೋಧಿ ಭೂಮಾಲೀಕರ ವಿರುದ್ದ ರೈತರು ನಡೆಸಿದ ಮಹಾಹೋರಾಟವದು.

ವ್ಯವಸ್ಥೆಯ ಅಧಿಕಾರ, ಅಹಂಕಾರ, ಅಂತಸ್ತು... ಇತ್ಯಾದಿ ಎದುರು ಸಾಮಾನ್ಯ ರೈತರು ತಮ್ಮ ಅಸ್ತಿತ್ವ ಹಾಗೂ ಆತ್ಮಗೌರವಕ್ಕಾಗಿ ನಡೆಸಿದ ಸುದೀರ್ಘ ಸಮರ. ಸರ್ವಾಧಿಕಾರ ಎನ್ನುವ ಪರ್ವತವನ್ನು ಛಿದ್ರಗೊಳಿಸಿದ ಸಾಮಾನ್ಯ ಜನರ ಆತ್ಮಬಲ ಅದು. ಆ ಹೋರಾಟ ತೆಲುಗುನಾಡಿನ ಚರಿತ್ರೆಯಲ್ಲಿ ಒಂದು ಉಜ್ವಲಘಟ್ಟ, ಚರಿತ್ರೆಯ ಆ ಹೋರಾಟಕ್ಕೆ ಮುಖಾಮುಖಿಯಾದವರು ಜನಸಾಮಾನ್ಯರು. ಹಾಗಾಗಿ ಇದು ನಿಜಚರಿತ್ರೆಯ ಅನಾವರಣ. ಇಂಥ ಚಾರಿತ್ರಿಕ ಗ್ರಂಥವನ್ನು ಕಟ್ಟಿಕೊಟ್ಟವರು ಕಮ್ಯೂನಿಸ್ಟ್ ನೇತಾರ ಪಿ.ಸುಂದರಯ್ಯನವರು.

ಈ ಕೃತಿಯಲ್ಲಿ ಸುಂದರಯ್ಯನವರು ವ್ಯವಸ್ಥೆಯ ಕ್ರೌರ್ಯ ಮತ್ತು ಹಿಂಸೆಗೆ ಎದುರಾದ ರೈತಾಪಿ ಸಮುದಾಯದ ಬದ್ಧತೆ, ತ್ಯಾಗ ಮತ್ತು ಕಮ್ಯೂನಿಸ್ಟ್ ಸಿದ್ಧಾಂತಗಳನ್ನೇ ಬದುಕಿದ ವೀರಗಾಥೆಗಳನ್ನು ಜೀವಂತವಾಗಿ ಚಿತ್ರಿಸಿದ್ದಾರೆ. ಚರಿತ್ರೆಯ ವಿದ್ಯಮಾನಗಳನ್ನು ಶ್ರಮಿಕರ ಮತ್ತು ಸಾಮಾನ್ಯರ ನೆಲೆಯಿಂದ ಶೋಧಿಸಿದ ಈ ಕೃತಿ ನಮ್ಮ ಅರಿವನ್ನು ವಿಸ್ತರಿಸುವ ಶಕ್ತಿಯನ್ನು ಹೊಂದಿದೆ.

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Awards & Recognitions

Related Books