ಭೂಕಬಳಿಕೆ ವಿರೋಧಿಸಿ ನಡೆಸಿದ ಹೋರಾಟದ ಅನುಭವವನ್ನು ಓದುಗರೊಂದಿಗೆ ಹಿರಿಯ ಸ್ವಾತಂತ್ಯ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಹಂಚಿಕೊಂಡ ಕೃತಿಯೇ-ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳೀಸಿದ ಹೋರಾಟ.,
ಪುಸ್ತಕ ಕುರಿತು ಬರೆದಿರುವ ಎಚ್.ಎಸ್. ದೊರೆಸ್ವಾಮಿ, ‘ಬಾಲಸುಬ್ರಹ್ಮಣ್ಯಂ ವರದಿಯಲ್ಲಿ ಕರ್ನಾಟಕದಲ್ಲಿ ಒಟ್ಟು 4 ಲಕ್ಷ ಎಕರೆ ಜಮೀನು ಕಬಳಿಕೆಯಾಗಿದೆ ಎಂದಿದ್ದರೆ, ಎ.ಟಿ. ರಾಮಸ್ವಾಮಿ ವರದಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 40ಸಾವಿರ ಎಕರೆ ಜಮೀನು ಭೂಗಳ್ಳರ ವಶವಾಗಿದೆ ಎಂದಿದ್ದಾರೆ. ಆದರೆ ವಾಸ್ತವವಾಗಿ ಇದಕ್ಕೆ 10ರಷ್ಟು ಜಮೀನು ಕರ್ನಾಟಕದಲ್ಲಿ ಕಬಳಿಕೆಯಾಗಿದೆ. ಈ ಎಲ್ಲ ಸರ್ಕಾರಿ ಜಮೀನನ್ನು ವಾಪಸ್ಸು ತೆಗೆದುಕೊಳ್ಳಲು ಸರ್ಕಾರ ಒಂದು ಜನತಾ ಹೋರಾಟವನ್ನೇ ನಡೆಸಬೇಕಾಯಿತು. ಎ.ಟಿ.ರಾಮಸ್ವಾಮಿ, ನಿವೃತ್ತ ನ್ಯಾ., ಸಂತೋಷ ಹೆಗ್ಡೆ, ಮಾಜಿ ಸ್ಪೀಕರ್ ಕೃಷ್ಣ, ಎಲ್ಲಪ್ಪ ರೆಡ್ಡಿ, ಎಚ್.ಎಸ್. ದೊರೆಸ್ವಾಮಿ, ಎಸ್.ಆರ್. ಕಾಂತಾ ಸೇರಿದಂತೆ ಎಲ್ಲ ಹೋರಾಟ ಸಂಸ್ಥೆಗಳೂ ಕೂಡಿಕೊಂಡು 39 ದಿನಗಳ ಅವಿಸ್ಮರಣೀಯ ಹೋರಾಟ ನಡೆಸುವುದರ ಮೂಲಕ ಸಿದ್ದರಾಮಯ್ಯ ಸರ್ಕಾರವನ್ನು ಮಣಿಸಲಾಯಿತು. ಈ ಹೋರಾಟದ ವಿವರಗಳನ್ನು ಈ ಹೊತ್ತಿಗೆಯಲ್ಲಿ ನೀಡಿರುವುದಾಗಿ ಹೇಳೊಕೊಂಡಿದ್ದಾರೆ.
©2025 Book Brahma Private Limited.