ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರು ಬರೆದ ಕೃತಿ-ದಲಿತ ಚಳವಳಿಯ ಇತಿಹಾಸ ಸಂಪುಟ-2. ಬುದ್ಧ-ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಗಳ ಬುನಾದಿಯೊಂದಿಗೆ ಆರಂಭವಾದ ದಲಿತ ಚಳವಳಿ ತನ್ನ ಹಾದಿಯನ್ನು ಹತ್ತು ಹಲವು ಏಳು-ಬೀಳುಗಳನ್ನು ಕಂಡಿತು. ಹೋರಾಟದ ಹಾದಿಯಲ್ಲಿ ಇದು ಸರ್ವೇ ಸಾಮಾನ್ಯ. ಇತಿಹಾಸದ ಈ ಹೋರಾಟದ ಸ್ವರೂಪವನ್ನು ಸರಣಿಯಲ್ಲಿ ರಾಜ್ಬದ ವಿವಿಧೆಡೆಯಿಂದ ಬಂದ ಲೇಖನಗಳನ್ನು ಸಂಗ್ರಹಿಸುತ್ತಾ ಬಂದ ಪ್ರಯತ್ನದ ಭಾಗವಾಗಿ ಈ ಕೃತಿಯು 2ನೇ ಸಂಪುಟವಾಗಿದೆ. ಒಂದು ಹೋರಾಟ-ಚಳವಳಿಯ ಏಳು-ಬೀಳುಗಳನ್ನು ಯಶಸ್ವಿ-ವೈಫಲ್ಯಗಳನ್ನು ಅಧ್ಯಯನ ಮಾಡಲು ಈ ಕೃತಿ ಅತ್ಯಂತ ಉಪಯುಕ್ತವಾಗಿದೆ.
©2024 Book Brahma Private Limited.