ಡಾ. ಸಣ್ಣರಾಮ ಅವರು ಬರೆದಿರುವ ಕೃತಿ ’ದಲಿತ ಚಳವಳಿ’ಯು ನಾಲ್ಕು ದಶಕಗಳ ಹಿಂದೆ ನಾಡು ಕಂಡ ಅಪರೂಪದ ಸಂಘಟನೆ ಮತ್ತು ಚಳವಳಿಯ ಹೋರಾಟದ ಕಥನವನ್ನು ಚಿತ್ರಿಸಿದೆ.
ಪ್ರೊ. ಬಿ. ಕೃಷ್ಣಪ್ಪನವರಿಂದ ಸಂಸ್ಥಾಪನೆಯಾದ ದಲಿತ ಸಂಘರ್ಷ ಸಮಿತಿ ನಡೆಸಿದ ಹೋರಾಟ, ಪ್ರತಿಭಟನೆಗಳ ಗತದ ಚಿತ್ರಣವನ್ನು ವರ್ತಮಾನಕ್ಕೆ ಸಣ್ಣರಾಮರು ನಿರೂಪಿಸಿದ್ದಾರೆ. ಇದರ ಜೊತೆಗೆ ಪ್ರೊ. ಬಿ. ಕೃಷ್ಣಪ್ಪನವರ ಚಿಂತನೆ, ಅವರ ಒಡನಾಟ ಇಡೀ ಕೃತಿಯಲ್ಲಿ ವಿಸ್ತರಿಸಿದೆ.
ಈ ಕೃತಿ ಕೇವಲ ಚರಿತ್ರೆಯ ದಾಖಲಾತಿಯಾಗದೆ ದಲಿತ ಸಮುದಾಯದ ಅಭಿವೃದ್ದಿಯ ಕಡೆ ಗಮನ ಹರಿಸುತ್ತದೆ. ದಲಿತ ಸಂಘರ್ಷ ಸಮಿತಿ ತಾತ್ವಿಕವಾಗಿ ಸಂಘಟನಾತ್ಮಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳದೇ ಸಂಘಟನೆಗೆ ಆದ ಗಾಯದ ಕಥಾನಕವನ್ನು ಇಲ್ಲಿ ಲೇಖಕರು ಕಟ್ಟಿಕೊಡುತ್ತಾರೆ.
©2025 Book Brahma Private Limited.