‘ಉದಯಾಸ್ತ’ ತಿಲಕ ಅವರ ಸಾಮಾಜಿಕ ಕಾದಂಬರಿಯಾಗಿದೆ. ಸ್ಟೇಷನಿನ ಮಾಸ್ತರರಿಂದ ಶುರುವಾಗುವ ಈ ಕತೆಯು ಬಹಳಷ್ಟು ವಿಚಾವರನ್ನು ತನ್ನೊಳಗಿನ ಪಾತ್ರಗಳಿಗೆ ನೀಡಿ ಜೀವಂತಿಕೆಯನ್ನು ಮೆರೆಸುತ್ತದೆ. ಭಾಷಾ ಬಳಕೆಯ ಶೈಲಿಯು ಭಿನ್ನವಾಗಿ ಮೂಡಿ ಬಂದಿದ್ದು, ಭಾಷೆಯೇ ಸಂಭಾಷಣೆಗಳಿಗೆ ಮತ್ತಷ್ಟು ಪುಷ್ಠಿಯನ್ನು ನೀಡಿದೆ. ಈ ಕೃತಿಯಲ್ಲಿನ ಆಯ್ದ ಭಾಗ: ಸಾಹೇಬರ ಮಾತಿನ ಜಾಡು ಈಗ ಎಡ್‌ವಿನ್‌ಗೆ ಚೆನ್ನಾಗಿ ಹೊಳೆಯಿತು. ಅವನು ಯಾರೋ ಗೋಪಾಲಯ್ಯನ ಮೇಲೆ ಮೂಕ ಕೊಟ್ಟಿರಬೇಕೆಂದು ಅರ್ಥಮಾಡಿಕೊಂಡನು. ಒಡನೆಯೇ ಆತನು ಸಂಜೀವಯ್ಯ ಚಂಪೆಯರು ಚಿಕ್ಕಜಾಜೂರಿನಲ್ಲಿ ಕಾಲಿಟ್ಟಂದಿನಿಂದ ಅಂದಿನವರೆಗೆ ನಡೆದ ಎಲ್ಲ ಸಂಗತಿಯನ್ನೂ ವಿವರವಾಗಿ ಸಾಹೇಬರಿಗೆ ತಿಳಿಸಿ, ದುಂಡಪ್ಪನ ಕೃಷ್ಣ ಕಾರ ಸ್ಥಾನವನ್ನೆಲ್ಲ ಅವರಲ್ಲಿ ಶೃತಪಡಿಸಿದನು. ಸಾಹೇಬರು ನಕ್ಕು ನನಗೊಂದು ಕೆಲಸ ಕೊಟ್ಟರು” ಎಂದರು. ಎಂದರು. ಎಡ್‌ವಿನ್‌ನು “ ತೊಂದರೆ ಯಾಗಲಿಲ್ಲವಲ್ಲಾ ಅನಾಯಾಸವಾಗಿ ಅವಳ ಸ೦ಗಿತ ಕೇಳಬಹುದು ಎಂದನು. * ನಮಗೇಕಪ್ಪಾ ಸಂಗೀತ-ಅದೆಲ್ಲ ನಿಮ್ಮಂತಹ ಹುಡುಗರಿಗೆ ” ಎಂದು ಎಡ್‌ವಿನ್‌ನನ್ನು ಬೀಳ್ಕೊಟ್ಟರು ಮ್ಯಾಥನ್ ಸಾಹೇಬರು.
©2024 Book Brahma Private Limited.