ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ : ಕಾಲು ಶತಮಾನ

Author : ಲಕ್ಷ್ಮೀನಾರಾಯಣ ನಾಗವಾರ

Pages 218

₹ 225.00




Year of Publication: 2014
Published by: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ
Address: ‘ಮಿಲಿಂದ’ ನಂ 22/1, 16ನೇ ಕ್ರಾಸ್, ಕನಕನಗರ, ಆರ್‌. ಟಿ. ನಗರ ಅಂಚೆ, ಬೆಂಗಳೂರು - 32

Synopsys

1973ರ ಪೌರಾಡಳಿತ ಸಚಿವ ಬಿ.ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಲೇವಡಿ ಮಾಡಿದ್ದರ ಪರಿಣಾಮ ಅವರ ಹೇಳಿಕೆಯನ್ನು ರಾಜಕೀಯ ಗೊಳಿಸಲಾಯಿತು. ಇದು ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿ, ದಲಿತ ಹಾಗೂ ದಲಿತೇತರ ನಡುವಿನ ಘರ್ಷಣೆಗೆ ಕಾರಣವಾಗಿ ‘ಬೂಸಾ ಚಳವಳಿ’ ಮುನ್ನೆಲೆಗೆ ಬಂದಿತು. ಹೀಗೆ ದಲಿತ ಚಳವಳಿಗೆ ಭದ್ರ ಬುನಾದಿ ಹಾಕಿದ್ದು `ಬೂಸಾ ಚಳವಳಿ’ ಎಂದರೆ ತಪ್ಪಾಗಲಾರದು. ಬೂಸಾ ಚಳವಳಿಗೆ 25 ವರ್ಷಗಳಾದ ಹಿನ್ನೆಲೆಯಲ್ಲಿ ಲಕ್ಷ್ಮೀನಾರಾಯಣ ನಾಗವಾರ ಅವರು ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ : ಕಾಲು ಶತಮಾನ’ ಸಂಪಾದಿಸಿದ ಕೃತಿ ಇದಾಗಿದೆ.

ಸಮಾನತೆಯ ಮತ್ತು ಆಧ್ಯಾತ್ಮದ ಹಸಿವು - ಯು. ಆರ್. ಅನಂತಮೂರ್ತಿ, ಬೂಸಾ ಚಳವಳಿ - ನೆನಪು ಸಾಧನೆ - ಕಿ. ರಂ. ನಾಗರಾಜ್, ಬೂಸಾ ಚಳವಳಿ : ಹಿರಿಯರು ಮತ್ತು ಕಿರಿಯರು - ಕೆ. ಮರುಳಸಿದ್ದಪ್ಪ, ಬೂಸಾ ಚಳವಳಿ ಒಂದು ಸಾಂಸ್ಕೃತಿಕ ಅನುಭವ - ಶೂದ್ರ ಶ್ರೀನಿವಾಸ, ಸಮರ್ಥ ನಾಯಕತ್ವ - ವಿ ಶ್ರೀನಿವಾಸ ಪ್ರಸಾದ್ ಮುಂತಾದವರು ಚಳವಳಿ ಕುರಿತು ಮೆಲುಕು ಹಾಕಿದ ಬರಹಗಳನ್ನು ಇಲ್ಲಿ ಕಾಣಬಹುದು.

About the Author

ಲಕ್ಷ್ಮೀನಾರಾಯಣ ನಾಗವಾರ

ಲಕ್ಷ್ಮೀನಾರಾಯಣ ನಾಗವರ ಅವರು ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದವರು. ತಮ್ಮ ವಿದ್ಯಾರ್ಥಿ ದಿನಗಳಲ್ಲೇ ದಲಿತ ಹಕ್ಕುಗಳ ಬಗ್ಗೆ ಧ್ವನಿಯನ್ನು ಎತ್ತುತ್ತಾ ಬಂದವರು. ಸಾಹಿತ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಹ ಅತ್ಯಂತ ಆಸ್ಥೆ ಹೊಂದಿದ್ದ ಅವರು ಕಾಲೇಜು ಜೀವನದಲ್ಲೇ ಸಮಾಜ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳ ಅಧ್ಯಾಪಕರಿಗೆ ಪ್ರೀತಿಯ ವಿದ್ಯಾರ್ಥಿಯಾಗಿ ‘ದಲಿತ ವಿದ್ಯಾರ್ಥಿ ಒಕ್ಕೂಟ’ದ ಮುಖಂಡರಾಗಿದ್ದರು.  ದಲಿತ ಹಿರಿಯ ನೇತಾರ ಬಿ. ಬಸವಲಿಂಗ ಅವರು ನಡೆಸಿದ ಬೂಸಾ ಚಳವಳಿಗೆ ಇಪ್ಪತ್ತೈದು ವರ್ಷಗಳಾದ ಸಂದರ್ಭದಲ್ಲಿ ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ : ಕಾಲು ಶತಮಾನ’ ಪುಸ್ತಕವನ್ನು ಸಂಪಾದಿಸಿ ಕನ್ನಡ ...

READ MORE

Related Books