‘ಅಂಬೇಡ್ಕರ್ ಏಕೆ ಮನುಸ್ಮೃತಿ ಸುಟ್ಟರು’ ಲೇಖಕ ವಿಕಾಸ್ ಆರ್ ಮೌರ್ಯ ಅವರು ರಚಿಸಿರುವ ಕೃತಿ. ಡಾ.ಬಿ.ಆರ್. ಅಂಬೇಡ್ಕರ್ ತಮ್ಮ ಹೋರಾಟದ ರಥವನ್ನು ಭಾರತದ ಪರಿಸ್ಥಿತಿಗಳನ್ನು ಗಮನಿಸಿದರೆ ಆ ಹೋರಾಟದ ರಥವನ್ನು ಹಿಂದೆ ಎಳೆಯುವವರ ಕೈಗಳು ಮೇಲಾಗಿರುವಂತೆ ಕಾಣುತ್ತಿದೆ. ಮತ್ತೆ ಮನುಸ್ಮೃತಿಯು ನಮ್ಮ ದೇಶದ ಸಂವಿಧಾನದ ಮೇಲೆ ಪ್ರತಿಕ್ರಾಂತಿ ಹೂಡುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಮನುಸ್ಮೃತಿ ಎತ್ತಿ ಹಿಡಿಯುವ ಮೇಲು-ಕೀಳು, ತಾರತಮ್ಯ, ಬ್ರಾಹ್ಮಣ್ಯ ಶ್ರೇಷ್ಠತೆಯನ್ನು ಆಳುವ ಸರ್ಕಾರಗಳೇ ಜನರ ಮೇಲೆ ಹೇರುತ್ತಿವೆ. ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ, ನ್ಯಾಯಗಳು ಮಸುಕಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರರು ಮನುಸ್ಮೃತಿಯನ್ನು ಏಕೆ ಸುಟ್ಟರು ಎಂಬುದನ್ನು ತಿಳಿದುಕೊಳ್ಳುವ ಜರೂರು ಎಲ್ಲರಿಗೂ ಇದೆ. ಅದರಲ್ಲಿಯೂ ಬ್ರಾಹ್ಮಣ್ಯದ ಬಲೆಯಲ್ಲಿ ಸಿಕ್ಕಿ ನರಳಾಡುತ್ತಿರುವ ಶೂದ್ರರು, ದಲಿತರು ಮತ್ತು ಮಹಿಳೆಯರಿಗೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಈ ಕೃತಿಯನ್ನು ಹೊರತರುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಘಟಕದ ದಲಿತ ಸಂಘರ್ಷ ಸಮಿತಿ ತಿಳಿಸಿದೆ.
©2025 Book Brahma Private Limited.