ಮಹದಾಯಿ ನೀರಿಗಾಗಿ ಹೋರಾಟ

Author : ಎಂ.ಕೆ. ಹೆಗಡೆ

Pages 96

₹ 125.00




Year of Publication: 2016
Published by: ಕನ್ನಡ ಜಾಗೃತಿ ಪುಸ್ತಕ ಮಾಲೆ
Address: ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ, ಸಿದ್ಧಸಂಸ್ಥಾನಮಠ ಚಿಂಚಣಿ- 591272, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ.
Phone: 9341029326

Synopsys

‘ಮಹದಾಯಿ ನೀರಿಗಾಗಿ ಹೋರಾಟ’ ಕೃತಿಯು ಎಂ.ಕೆ. ಹೆಗಡೆ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಸಿದ್ಧರಾಮ ಸ್ವಾಮಿಗಳು, `ಉತ್ತರ ಕರ್ನಾಟಕದ ಹುಬ್ಬಳ್ಳಿ -ಧಾರವಾಡ, ನರಗುಂದ, ನವಲಗುಂದ ಭಾಗದ ಜನಸಮುದಾಯಕ್ಕೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮಹದಾಯಿ ನೀರು ಹರಿಸಬೇಕೆಂದು ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದೆ. 1975 ರಲ್ಲಿ,  ಬಾದಾಮಿ ಶಾಸಕರಾಗಿದ್ದ ಬಿ.ಎಂ. ಹೊರಕೇರಿ ಅವರು ವಿಧಾನಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಹದಾಯಿ ನದಿ ತಿರುವು ಕುರಿತು ಯೋಜನೆ ಬಗ್ಗೆ ಪ್ರಸ್ತಾವ ಮಾಡಿದ್ದರು. ಖ್ಯಾತ ನೀರಾವರಿ ತಜ್ಞರಾಗಿದ್ದ ಎಸ್.ಜಿ. ಬಾಳೇಕುಂದ್ರಿ ಅವರು ಈ ಯೋಜನೆಯ ಕುರಿತು ಕನಸು ಕಂಡಿದ್ದರು. ಯೋಜನೆ ಅನುಷ್ಠಾನಕ್ಕೆ ಸಂಕಲ್ಪ ಮಾಡಿದ್ದರು. 1980ರ ದಶಕದಲ್ಲಿ ಅಂದಿನ ಸರಕಾರ ನೀರು ಕೊಡದೆ ನೀರಿನ ಕರವನ್ನು ಒತ್ತಾಯಪೂರ್ವಕವಾಗಿ ವಸೂಲಿ ಮಾಡಿದ ಕ್ರಮವನ್ನು ನರಗುಂದ ರೈತರು ತೀವ್ರವಾಗಿ ವಿರೋಧಿಸಿದರು. 1980 ಜೂನ್ 21ರಂದು ನರಗುಂದ ರೈತರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದರು. ಅನೇಕ ರೈತರು ತಮ್ಮ ಬದುಕನ್ನು ಬಲಿದಾನ ಗೈದರು. ನಂತರ ಎಸ್.ಆರ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿ ನೇಮಿಸಲಾಯಿತು. ಅಂದಿನ ಗೋವಾ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಿತು. ಹೀಗೆ ಆರಂಭವಾದ ಮಹದಾಯಿ ನದಿ ನೀರಿನ ಹೋರಾಟ ಕಳೆದ ವರ್ಷ ಉಗ್ರ ಸ್ವರೂಪ ತಾಳಿತು. ಇಡೀ ರಾಜ್ಯದ ಜನ ಹೋರಾಟಕ್ಕಿಳಿದರು. ನಾಡಿನ ಪ್ರಜ್ಞಾವಂತ ಮಠಾಧೀಶರು, ಚಿತ್ರ ರಂಗದವರು ಪಾಲ್ಗೊಳ್ಳುವ ಮೂಲಕ ಅದಕ್ಕೆ ಇನ್ನಷ್ಟು ವ್ಯಾಪಕತೆ ಪ್ರಾಪ್ತವಾಯಿತು. ಇಂಥ ಮಹತ್ತರವಾದ ಹೋರಾಟದ ವೈವಿಧ್ಯಮಯ ಮಗ್ಗಲುಗಳನ್ನು ಪ್ರಸ್ತುತ ಕೃತಿಯಲ್ಲಿ ಎಂ.ಕೆ. ಹೆಗಡೆ ಅವರು ತುಂಬಾ ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ. ಅವರ ಅಧ್ಯಯನದ ವ್ಯಾಪ್ತಿ ವಿಸ್ತಾರವಾಗಿದೆ. ಅಂತರ್ ರಾಜ್ಯ ನದಿ ವಿವಾದಗಳು, ಮಹದಾಯಿ ಹೋರಾಟ, ಅದರ ಫಲಶೃತಿ, ಅದರ ಅನುಷ್ಠಾನದಿಂದ ಆಗುವ ಸಾಧಕ, ಬಾಧಕಗಳು, ಪರಿಸರ ನಾಶ ಮೊದಲಾದ ವಿಷಯಗಳ ಕುರಿತು ಎಂ.ಕೆ. ಹೆಗಡೆ ತಲಸ್ಪರ್ಶಿಯಾದ ಅಧ್ಯಯನ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಎಂ.ಕೆ. ಹೆಗಡೆ
(02 March 1971)

ಎಂ.ಕೆ. ಹೆಗಡೆ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಚನ್ನಮ್ಮ ನಗರದವರು. ವೃತ್ತಿಯಿಂದ ಪತ್ರಕರ್ತರು. ವಿಜಯಕರ್ನಾಟಕ, ವಿಜಯವಾಣಿ, ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ‘ಸಾವಿತ್ರಿಬಾಯಿ ಫುಲೆ’ ಸಿನಿಮಾದಲ್ಲಿ ನಟಿಸಿದ್ದಾರೆ.  ಕೃತಿಗಳು: ಮಹದಾಯಿ ನೀರಿಗಾಗಿ ಹೋರಾಟ ಪ್ರಶಸ್ತಿ-ಪುರಸ್ಕಾರಗಳು: ರಾಜಾಧ್ಯಕ್ಷ ಪ್ರಶಸ್ತಿ-2003, ಇಂಡಿಯನ್ ಎಕ್ಸ್ ಪ್ರೆಸ್ಸ್ ಪ್ರಶಸ್ತಿ, ಟೈಮ್ಸ್ ಗ್ರೂಫ್ ಚೇರ್ ಮೆನ್ ಪ್ರಶಸ್ತಿ, ಶ್ರೀಗಂಧ ರಾಜ್ಯೋತ್ಸವ ಪ್ರಶಸ್ತಿ- 2016 ಲಭಿಸಿವೆ. ...

READ MORE

Related Books