‘ಸ್ವಾತಂತ್ಯ್ರ ಸೂರ್ಯೋದಯ’ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಕೃತಿಯಾಗಿದೆ. ಸೂರ್ಯನಾಥ ಕಾಮತ್ ಅವರ ‘ಸ್ವಾತಂತ್ಯ್ರ ಸೂರ್ಯೋದಯ’ ಕೃತಿಯು ಸ್ವಾತಂತ್ರ್ಯ ಚಳುವಳಿಯ ಕುರಿತು ಮಾತನಾಡುತ್ತದೆ. ಕನ್ನಡದ ಅಗ್ರಗಣ್ಯ ಇತಿಹಾಸಕರಲ್ಲಿ ಒಬ್ಬರಾಗಿರುವ ಇವರು, ದೇಶದ ಸ್ವಾತಂತ್ಯ್ರ ಹೋರಾಟದ ಕುರಿತು ಮಹತ್ವದ ಕೃತಿಗಳನ್ನು ಬರೆದವರು. ಕರ್ನಾಟಕ ರಾಜ್ಯ ಸ್ವಾತಂತ್ಯ್ರ ಹೋರಾಟಗಾರರ ಕಥನಗಳನ್ನು ಜತನದಿಂದ ಸಂಗ್ರಹಿಸಿ ದಾಖಲಿಸಿದವರು. ಅವರು ಹೊಸ ಪೀಳಿಗೆಯ ಅಗತ್ಯವನ್ನು ಅರಿತು ಸಂಕ್ಷಿಪ್ತವಾಗಿ ದೇಶದ ಸ್ವಾತಂತ್ಯ್ರ ಸಂಗ್ರಾಮವನ್ನು ದಾಖಲಿಸಿರುವ ಮಹತ್ವದ ಕೃತಿ ಇದಾಗಿದೆ. ಈ ಕೃತಿಯು 2002ರಲ್ಲಿ ಮೊದಲ ಮುದ್ರಣವನ್ನು ಕಂಡಿತ್ತು.
©2024 Book Brahma Private Limited.