ಡಾ. ವಿ. ಮುನಿವೆಂಕಟಪ್ಪ ಅವರ ವೈಚಾರಿಕ ಸಂಪಾದಿತ ಕೃತಿ-ಬಹುಜನ ಚಳವಳಿಯ ಚರಿತ್ರೆ ಸಂಪುಟ-4. ಲೇಖಕರು ಸ್ವತಃ ಹೋರಾಟದ ಹಿನ್ನೆಲೆಯವರು. ಬಹುಜನ ಹಾಗೂ ದಲಿತ ಚಳವಳಿಯಲ್ಲಿ ಭಾಗಿಯಾಗಿ ಅದರ ಏಳು-ಬೀಳುಗಳನ್ನು ಕಂಡವರು. ಹೋರಾಟವು ನಡೆಯುವ ಹಾದಿಯನ್ನು ತಮ್ಮ ತೀಕ್ಷ್ಣ ಮನಸ್ಸಿನೊಂದಿಗೆ ವಿಶ್ಲೇಷಿಸಿದ ಒಳನೋಟಗಳು ಇಲ್ಲಿವೆ. ಸಮಾಜದಲ್ಲಿ ಸಮಾನತೆ ತರುವ ಉದ್ದೇಶ ಅಂಬೇಡ್ಕರ್ ಅವರಿಗೆ ಇತ್ತೇ ವಿನಃ ದಲಿತರ ರಾಜಕಾರಣವನ್ನು ಆರಂಭಿಸುವ ಚಿಂತನೆ ಅವರದ್ದು ಆಗಿರಲಿಲ್ಲ ಎಂಬ ಪ್ರಖರ ಪ್ರತಿಪಾದನೆಗಳು ಇಲ್ಲಿ ಲೇಖನಗಳ ರೂಪದಲ್ಲಿ ಸಂಗ್ರಹಗೊಂಡಿವೆ. ಭಾರತದ ಅಸಮಾನತೆಯ ಸಮಾಜದ ಒಟ್ಟು ವಿಶ್ಲೇಷಣೆಯ ಸೂಕ್ಷ್ಮ ಒಳನೋಟವನ್ನು ಈ ಕೃತಿ ನೀಡುತ್ತದೆ. ಡಾ. ಕೆ. ಸದಾಶಿವ ಅವರು ಮೌಲಿಕ ಮುನ್ನುಡಿ ಬರೆದಿದ್ದು, ಲೇಖನಗಳ ವೈಚಾರಿಕತೆಯನ್ನು ಪ್ರಶಂಸಿಸಿದ್ದಾರೆ.
©2024 Book Brahma Private Limited.