ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಸಂಪಾದಿತ ಕೃತಿ-ದಲಿತ ಚಳವಳಿ ಚರಿತ್ರೆ ಸಂಪುಟ-17. ದಲಿತ ಚಳವಳಿಯು ಸಾಮಾಜಿಕ ಹಾಗೂ ಸಾಂಸ್ಕೃತಿಕ ಒತ್ತಡದಲ್ಲಿ ಹುಟ್ಟುವಂತದ್ದು. ಅದಕ್ಕೆ ಐತಿಹಾಸಿಕ ಮಹತ್ವವೂ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ವ್ಯಕ್ತವಾದ ಅಭಿಪ್ರಾಯಗಳು ಲೇಖನಗಳ ರೂಪದಲ್ಲಿ ಸರಣಿ ಸರಣಿಯಾಗಿ ಬಂದ ವಿಚಾರಗಳನ್ನು ಇಲ್ಲಿ ಸೇರ್ಪಡೆಗೊಳಿಸಲಾಗಿದೆ. ಚಾರಿತ್ರಿಕ ಹೋರಾಟವೊಂದರ ಏಳು-ಬೀಳುಗಳ ಅಧ್ಯಯನಕ್ಕೆ ಈ ಕೃತಿ ಮಹತ್ವದ ಆಕರ ಒದಗಿಸುತ್ತದೆ.
©2024 Book Brahma Private Limited.