ಕಲಬುರಗಿಯ ವಿಕಾಸ ಅಕಾಡೆಮಿಯು 2010ರಲ್ಲಿ ’ಕಲಬುರ್ಗಿ ಕಂಪು’ ಮತ್ತು ಭಾರತ ವಿಕಾಸ ಸಂಗಮ-೩ ಎನ್ನುವ ವಿನೂತನ ಕಾರ್ಯಕ್ರಮವನ್ನು ಗುಲಬರ್ಗಾದ ಶಿವಶರಣಪ್ಪ ಉಪ್ಪಿನ ಅವರ ತೋಟದ ಆವರಣದಲ್ಲಿ ಏರ್ಪಡಿಸಿತ್ತು. ಸಿದ್ದೇಶ್ವರ ಸ್ವಾಮಿಗಳು ಮತ್ತು ಕೆ.ಎನ್. ಗೋವಿಂದಾಚಾರ್ ಅವರ ಮಾರ್ಗದರ್ಶನ, ಸಾವಿರಾರು ಸಂಘಟನೆಗಳ-ಹಲವಾರು ವ್ಯಕ್ತಿಗಳ ಸಮಾವೇಶದಲ್ಲಿ 10 ಲಕ್ಷಕ್ಕೂ ಮೀರಿದ ಜನ ಭಾಗವಹಿಸಿದ್ದರು.ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ರಾಮದೇವ ಬಾಬಾ, ಕೊಲ್ಹಾಪುರದ ಕನ್ಹೇರಿ ಆಶ್ರಮದ ಕಾಡಸಿದ್ದೇಶ್ವರ ಸ್ವಾಮಿಗಳು, ಅಯೋಧ್ಯಾ ಮತ್ತು ಮಥುರಾ ನಾಡಿನಿಂದ ಬಂದ ಸಂತರು, ಸೇವಾ ಪ್ರಮುಖರು, ಅಪೂರ್ವ ಸಾಧನೆಗೈದ ಶ್ರೇಷ್ಠರು ಭಾಗವಹಿಸಿದ್ದರು. ’ಕಲಬುರ್ಗಿ ಕಂಪು’ ಕಾರ್ಯಕ್ರಮದಲ್ಲಿ ಲಲಿತಕಲಾ ವಿಭಾಗವು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಲಾವಿದ ಡಾ. ಮಲ್ಲಿಕಾರ್ಜುನ ಬಾಗೋಡಿ ಅವರು ಆ ಎಲ್ಲ ಕಾರ್ಯಕ್ರಮಗಳ ಮಾಹಿತಿಯನ್ನು ಈ ’ಕಲಾ ಕಂಪು’ ಕೃತಿಯಲ್ಲಿ ಸೇರಿಸಿದ್ದಾರೆ.
©2024 Book Brahma Private Limited.