ಕಲ್ಯಾಣ ಕರ್ನಾಟಕವೆಂದು ಗುರುತಿಸಲಾಗುವ ಕಲಬುರಗಿ ಪ್ರದೇಶವನ್ನು ಕೆಲವು ವರ್ಷಗಳ ಹಿಂದಿನವರೆಗೂ “ಹೈದರಾಬಾದ ಕರ್ನಾಟಕ” ಎಂದು ಕರೆಯಲಾಗುತ್ತಿತ್ತು. 1948ರ ವರೆಗೆ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಧರ್ಮಾಂಧರಾದ ರಜಾಕಾರರೆಂಬ ಒಂದು ಪಡೆಯವರ ಉಪಟಳದಿಂದ ಸಾವಿರಾರು ಜನರ ಹತ್ಯೆಯಾಗುತ್ತಿತ್ತು. ಅದಕ್ಕಾಗಿ ಒಂದು ದೊಡ್ಡ ಆಂದೋಲನವೇ ಮಾಡಬೇಕಾಯಿತು. ಆ ಹೋರಾಟದ ಚರಿತ್ರೆಯನ್ನು ಈ ಕೃತಿಯಲ್ಲಿ ನೀಡಿದ್ದಾರೆ ಲೇಖಕ ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರು.
©2024 Book Brahma Private Limited.