‘ಭಾರತದಲ್ಲಿ ಆಧುನಿಕ ಕಲೆ ಮತ್ತು ಪಾಶ್ಚಾತ್ಯ ಕಲೆ’ ಬಹುಮುಖ ಪ್ರತಿಭೆಯ ಕಲಾವಿದ ಎನ್. ಮರಿಶಾಮಾಚಾರ್ ಅವರ ಕೃತಿ. ಭಾರತೀಯ ಚಿತ್ರಕಲೆಗೆ ಒಂದು ಭವ್ಯ ಇತಿಹಾಸವಿದೆ. ಅನೇಕ ವರ್ಷಗಳಿಂದ ಏಕಪ್ರಕಾರವಾಗಿ ಕಲೆ ಬೆಳೆದು ಬಂದಿದೆ. ಆದರೆ 18ನೆಯ ಶತಮಾನದ ಉತ್ತರಾರ್ಧದಿಂದ ಶಿಥಿಲವಾಗಲು ಪ್ರಾರಂಭವಾಗಿ 19ನೇ ಶತಮಾನದ ಪೂರ್ವಭಾಗದಲ್ಲಿ ನಮ್ಮ ಸಾಂಪ್ರದಾಯಿಕ ಕಲೆಗಳು, ಕುಶಲ ಕಲೆಗಳು ನಶಿಸಿಹೋಗಲು ಪ್ರಾರಂಭವಾಯಿತು. ಕ್ರಿ.ಶ. 1905ರಲ್ಲಿ ಧರ್ಮಶಾಲೆಯ ಭೂಕಂಪನ ಕಾರಣದಿಂದ ಕಾಂಗ್ರದ ನಿವಾಸಿಗಳು ಮತ್ತು ಅಲ್ಲಿಯ ಚಿತ್ರಕಾರರು ನಾಶವಾದಾಗ, ಈ ಶೈಲಿಯು ಸಮಾಪ್ತವಾಯಿತು. ಈ ಶೈಲಿಯ ಕೋಮಲತೆ ಮತ್ತು ಬಣ್ಣಗಳ ಅಲಂಕರಣ ಅದ್ವೀತಿಯ ಹಾಗೂ ಜನ ಸಾಮಾನ್ಯರ ಜೊತೆ ಸಂಬಂಧವಿದ್ದು, ಇಲ್ಲಿ ಪತನವಾದ ಮೇಲೆ ಪಟ್ಟಣಗಳಲ್ಲಿ ಚಿತ್ರಕಲೆ ಅಭಿವೃದ್ದಿ ಹೊಂದುತ್ತಿತ್ತು. ಮೊಗಲರ ಕಲೆ ದೆಹಲಿಯಲ್ಲಿ, ಲಕ್ನೋವಿನ ನವಾಬರಲ್ಲಿ, ಪಟ್ನಾ ಮತ್ತು ಕಲ್ಕತ್ತಾಗಳಲ್ಲಿ ಚಿತ್ರಕಲೆ ಮುಂದುವರೆದರೂ, ಇವುಗಳ ಯುರೋಪಿನ ವ್ಯಾಪಾರಿಗಳ ಆಜ್ಞೆಯಂತೆ ರಚಿಸಲ್ಪಟ್ಟಿದ್ದವು. ಇಂತಹ ರೋಚಕ ಇತಿಹಾಸವನ್ನು ಮರಿಶಾಮಾಚಾರ್ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಭಾರತೀಯ ಕಲೆ ನಡೆದುಬಂದ ಹಾದಿಯನ್ನು ಈ ಕೃತಿಯ ಮೂಲಕ ಅರ್ಥೈಸಿಕೊಳ್ಳಬಹುದು.
©2024 Book Brahma Private Limited.