ಬಂಡಾಯ ಸಾಹಿತ್ಯ: ಅರಿವು-ಅಂತರಂಗ

Author : ಆರ್.ಜಿ. ಹಳ್ಳಿ ನಾಗರಾಜ್

Pages 80

₹ 70.00




Year of Publication: 2018
Published by: ಅನ್ವೇಷಣೆ
Address: #1071, ಮಾತಾ ತನಿಷಾ ಆಪ್ಟ್ಸ್,4ನೇ ಅಡ್ಡರಸ್ತೆ, ಕೆಎಸ್ ಆರ್ ಟಿಸಿ ಲೇಔಟ್, ಚಿಕ್ಕಲಸಂದ್ರ, ಬೆಂಗಳೂರು-560 061
Phone: 9900566020

Synopsys

1975ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದನ್ನು ಪ್ರತಿಭಟಿಸಿ ಸಮಾಜವಾದಿ ನೆಲೆಯಲ್ಲಿ ಚಿಂತನೆಯು ಚಿಗುರೊಡೆದಿದ್ದೇ ಬಂಡಾಯ ಸಾಹಿತ್ಯ. ಅದು ಸಂಘಟನೆಯ ರೂಪು ತಳೆದು ಅಭಿವ್ಯಕ್ತಿ ಸ್ವಾತಂತ್ಯ್ರ ಶಕ್ತಿ ನೀಡಿತ್ತು. ವ್ಯವಸ್ಥೆಯನ್ನು ವಿರೋಧಿಸುವ ನಡೆಗೆ ನುಡಿಯ ರೂಪ ನೀಡಿ ಬಂಡಾಯ ಸಾಹಿತ್ಯ ಸೃಷ್ಟಿಯಾಗುತ್ತಾ ಹೋಯಿತು. 1979ರ ಮಾರ್ಚ್ 10ರಂದು ಬೆಂಗಳೂರಿನ ದೇವಾಂಗ ಹಾಸ್ಟೆಲ್ ನಲ್ಲಿ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಇಂದಿಗೆ ಆ ಚಳವಳಿಯು ತನ್ನ ಚಿಂತನೆಯ 40ನೇ ವರ್ಷ ಆಚರಿಸಿಕೊಳ್ಳುತ್ತಿದೆ. ಚಳವಳಿ ನಡೆದು ಬಂದ ದಾರಿ, ಸಾಧಿಸಿದ ಅಂಶಗಳು ಹೀಗೆ ಆತ್ಮಾವಲೋಕನವನ್ನು ಕಟ್ಟಿಕೊಡುವ ಉದ್ದೇಶದೊಂದಿಗೆ ಮೂಡಿ ಬಂದಿದ್ದೇ “ಬಂಡಾಯ ಸಾಹಿತ್ಯ: ಅರಿವು-ಅಂತರಂಗ. 

 

About the Author

ಆರ್.ಜಿ. ಹಳ್ಳಿ ನಾಗರಾಜ್

ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ...

READ MORE

Related Books