ಖ್ಯಾತ ಪರಿಸರವಾದಿ ನಾಗೇಶ ಹೆಗಡೆ ಅವರ ಕೃತಿ-ಸೈನ್ಸ್ ಸಫಾರಿ. ವಿಜ್ಞಾನಲೋಕದ ಅವಲೋಕನ ಈ ಕೃತಿಯಲ್ಲಿದೆ. ಶನಿಗ್ರಹದ ಬಳೆಗಳ ಮಧ್ಯೆ ನುಗ್ಗಿ ಕಸ್ಸಿನೀ ಗಗನನೌಕೆಯ ರೋಚಕ ವಿವರಗಳು, ನ್ಯೂಕ್ಲಿಯರ್ ನರಕದಲ್ಲಿ ಈಜ ಹೋಗಿ ಆತ್ಮಹತ್ಯೆ ಮಾಡಿಕೊಂಡ ರೋಬಾಟ್ ಗಳು, ಪಾತಾಳಕ್ಕೆ ರಂದ್ರ ಕೊರೆದು ಗಂಗೆಯನ್ನು ಉಕ್ಕಿಸ ಹೊರಟ ದುರಾಶ್ರಿತರ ಕಗ್ಗನಸುಗಳು, ಮಿನಿಸ್ಟರ್ ಮುಖಕ್ಕೇ ಕೀಟನಾಶಕ ಎರಚಲು ಹೊರಟ ಹತಾಶ ಕೃಷಿಕರ ದುಸ್ಸಾಹಸಗಳು, ಕಕ್ಷೆಯಲ್ಲಿ ಹೊಸ ರಾಷ್ಟ್ರ ನಿರ್ಮಿಸಿ ಕ್ಷುದ್ರ ಗ್ರಹಗಳ ಯಜಮಾನಿಕೆಗೆ ಸಜ್ಜಾದ ಗಣಿಧಣಿಗಳು, ಭಣಗುಡುವ ಗುಡ್ಡಕಂದರಗಳಲ್ಲಿ ನೀರಿಂಗಿಸಹೊರಟ ಬರಿಗೈ ಭಗೀರಥರ ದುಸ್ಸಾಹಸಗಳು ಹೀಗೆ ವಿಜ್ಞಾನದ ವಿವಿಧ ಕೌತುಕಗಳು-ವಿಸ್ಮಯಗಳ ಬರಹಗಳು ಸಂಕಲನಗೊಂಡಿವೆ.
©2025 Book Brahma Private Limited.